ಅಂತರಾಷ್ಟ್ರೀಯ

ಶೀಘ್ರದಲ್ಲೇ ಲಂಡನ್ ನ ಮೇಡಂ ತುಸಾಡ್ ಮ್ಯೂಸಿಯಂನಲ್ಲಿ ಪ್ರಧಾನಿ ಮೋದಿಯ ಮೇಣದ ಪ್ರತಿಮೆ ಅನಾವರಣ?

Pinterest LinkedIn Tumblr

modi_speech

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವ ನಾಯಕ ಎಂದು ಪರಿಗಣಿಸಲಾಗಿದ್ದು, ಶೀಘ್ರದಲ್ಲೇ ಲಂಡನ್ ನ ಮೇಡಂ ತುಸಾಡ್ ಮ್ಯೂಸಿಯಂನಲ್ಲಿ ಅವರ ಮೇಣದ ಪ್ರತಿಮೆ ಅನಾವರಣಗೊಳ್ಳುವ ಸಾಧ್ಯತೆ ಇದೆ.

ಇತ್ತೀಚಗಷ್ಟೇ ಪಿಆರ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ. ಫೇಸ್ ಬುಕ್ ನಲ್ಲಿ ಪ್ರಧಾನಿ ಮೋದಿ ಅವರು ವಿಶ್ವದ ಎರಡನೇ ಅತ್ಯಂತ ಜನಪ್ರಿಯ ನಾಯಕ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಜಾಗತಿಕವಾಗಿ ಭಾರತ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಡಿಜಿಟಲ್ ಇಂಡಿಯಾ, ಕ್ಲೀನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.

‘ಮೋದಿ ಕುರ್ತಾ’ ಎಂಬ ವಿಶೇಷ ಉಡುಗೆಯಿಂದಲೇ ಪ್ರಧಾನಿ ಮೋದಿ ಅವರು ಗುರುತಿಸಿಕೊಂಡಿದ್ದು, ಈಗ ಅದೇ ಉಡುಗೆಯಲ್ಲಿ ಮೇಡಂ ತುಸಾಡ್ ಮ್ಯೂಸಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Write A Comment