ರಾಷ್ಟ್ರೀಯ

ಕೋಟಾ ನೀತಿ ಮುಂದುವರೆಯಲಿದೆ ಎಂದ ಸರ್ಕಾರ

Pinterest LinkedIn Tumblr

Jaitley-@-Rajya-Sabhaನವದೆಹಲಿ (ಪಿಟಿಐ): ಪ್ರಸಕ್ತ ಸಾಮಾಜಿಕ ಹಾಗೂ ಜಾತಿ ಆಧಾರಿತ ಮೀಸಲಾತಿ ನೀತಿ ಮುಂದುವರೆಯಲಿದ್ದು, ಪುನರ್‌ ಪರಿಶೀಲನೆ ಇಲ್ಲ ಎಂದು ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

ಮೀಸಲಾತಿ ಕುರಿತು ಆರ್‌ಎಸ್‌ಎಸ್‌ನ ಕೆಲವು ಮುಖಂಡರು ನೀಡಿದ್ದ ಹೇಳಿಕೆಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ಸದಸ್ಯರು, ಈ ಬೆಳವಣಿಗೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭೆಯ ಸಭಾನಾಯಕರೂ ಆಗಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ‘ಸರ್ಕಾರದ ನೀತಿಯಾಗಿರುವ ಪ್ರಸ್ತಕ ಮೀಸಲಾತಿ ವ್ಯವಸ್ಥೆಯು ಮುಂದುವರೆಯಲಿದೆ’ ಎಂದರು.

ಅಲ್ಲದೇ, ಪ್ರಸಕ್ತ ಮೀಸಲಾತಿ ನೀತಿಯನ್ನು ಕೈಬಿಡುವ ಅಥವಾ ಬದಲಾಯಿಸುವ ಬಗ್ಗೆ ಆರ್‌ಎಸ್‌ಎಸ್‌ ಕೂಡ ‘ಮಾತನಾಡಿಲ್ಲ’ ಎಂದು ಸಮರ್ಥಿಸಿಕೊಂಡರು.

ಇದಕ್ಕೂ ಮೊದಲು, ಪ್ರಸಕ್ತ ಮೀಸಲಾತಿ ವ್ಯವಸ್ಥೆ ಬಗ್ಗೆ ಹುನ್ನಾರ ನಡೆಯುತ್ತಿದೆ ಎಂದು ಎಸ್‌ಪಿ ಪಕ್ಷದ ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದರು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳು ಮೀಸಲಾತಿ ಸೌಲಭ್ಯ ಪಡೆಯಲು ಬೇಕಿರುವ ಅರ್ಹತೆಯನ್ನು ಸಂವಿಧಾನ ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ಇದೀಗ ಆರ್‌ಎಸ್‌ಎಸ್‌ನವರು ಮೀಸಲಾತಿಯು ಆರ್ಥಿಕತೆಯ ಆಧಾರದಲ್ಲಿ ಇರಬೇಕು ಎಂದು ಹೇಳುತ್ತಿದ್ದಾರೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಹರಿಹಾಯ್ದರು.

Write A Comment