ಅಂತರಾಷ್ಟ್ರೀಯ

ಮಾಧ್ಯಮಗಳೊಂದಿಗೆ ಮಾತನಾಡಲು ಇಷ್ಟವಿಲ್ಲ: ಮಲ್ಯ

Pinterest LinkedIn Tumblr

vijay-mallya-new-reuters-L

ನವದೆಹಲಿ: ಲಂಡನ್ ನಲ್ಲಿ ಮಾಧ್ಯಮಗಳು ನನ್ನೊಂದಿಗೆ ಮಾತನಾಡುವ ಸಲುವಾಗಿ ಹುಡುಕಾಡುತ್ತಿವೆ. ಆದರೆ, ಬೇಸರ ಸಂಗತಿ ಎಂದರೆ ಅವರು ನಾನಿರುವ ಸ್ಥಳವನ್ನು ಹುಡುಕಲು ವಿಫಲವಾಗಿದ್ದಾರೆಂದು ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾನುವಾರ ಹೇಳಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು, ಲಂಡನ್ ನಲ್ಲಿ ಮಾಧ್ಯಗಳು ನನ್ನನ್ನು ಹುಡುಕಲು, ಭೇಟಿಯಾಗಲು ಸಾಕಷ್ಟು ಪ್ರಯತ್ನಗಳು ಮಾಡುತ್ತಿವೆ. ಆದರೆ, ನಾನಿರುವ ಸ್ಥಳವನ್ನು ಗುರ್ತಿಸಲು ವಿಫಲಾವಾಗಿವೆ. ನನಗೆ ಮಾಧ್ಯಮಗಳೊಂದಿಗೆ ಮಾತನಾಡಲು ಇಷ್ಟವಿಲ್ಲ, ವ್ಯರ್ಥ ಪ್ರಯತ್ನಗಳನ್ನು ಮಾಡಬೇಡಿ ಎಂದು ಹೇಳಿದ್ದಾರೆ.

ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆಂಬ ವರದಿಗಳಿಗೆ ಸಂಬಂಧಿಸಿ ಕೆಲವು ದಿನಗಳ ಹಿಂದಷ್ಟೇ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ನಾನು ಭಾರತವನ್ನು ಬಿಟ್ಟು ಓಡಿಹೋಗಿಲ್ಲ. ನಾನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಯಾಗಿದ್ದು, ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುತ್ತಿರುತ್ತೇನೆ. ನಾನೊಬ್ಬ ಸಂಸದನಾಗಿದ್ದು, ಭಾರತ ದೇಶದ ಕಾನೂನಿ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿಕೊಂಡಿದ್ದರು.

Write A Comment