ಅಂತರಾಷ್ಟ್ರೀಯ

ಭಾರತೀಯ ಮೂಲದ ವೈದ್ಯನಿಗೆ ಅಮೆರಿಕದಲ್ಲಿ 5 ವರ್ಷ ಜೈಲು ಶಿಕ್ಷೆ

Pinterest LinkedIn Tumblr

jail

ನ್ಯೂಯಾರ್ಕ್: ಭಾರತೀಯ ಮೂಲದ ವೈದ್ಯನಿಗೆ ಅಮೆರಿಕದ ಜಿಲ್ಲಾ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಹಣಕಾಸು ತೊಂದರೆ ಎದುರಿಸುತ್ತಿದ್ದ ಆಸ್ಪತ್ರೆಗೆ ವಯೋವೃದ್ಧ ರೋಗಿಗಳನ್ನು ಕಳುಹಿಸಿ ಅಕ್ರಮ ಹಣ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವೇಂಕಟೇಶ್ವರ ಕೂಚಿಪುಡಿ(69) ಅವರಿಗೆ ನ್ಯಾಯಾಮೂರ್ತಿ ಮ್ಯಾಥ್ಯೂ ಕೆನ್ನೆಲಿ ಅವರು ಐದು ವರ್ಷ ಜೈಲು ಹಾಗೂ ರು.1.67 ಕೋಟಿ ದಂಡ ವಿಧಿಸಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು 10 ಮಂದಿಗೆ ಶಿಕ್ಷೆಯಾಗಿದ್ದು, ಇದರಲ್ಲಿ ವೆಂಕಟೇಶ್ವರ ಐದನೆಯವರಾಗಿದ್ದಾರೆ. ಸತತ ಐದು ವಾರಗಳ ಕಾಲ ನಡೆದ ವಿಚಾರಣೆಯಲ್ಲಿ 10 ಮಂದಿ ಆರೋಪದ ಸಾಬೀತಾದ ಹಿನ್ನಲೆಯಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.

Write A Comment