ರಾಷ್ಟ್ರೀಯ

ನಾಳೆ ಸಂಪೂರ್ಣ ಸೂರ್ಯಗ್ರಹಣ: ಭಾರತದಲ್ಲಿ ಗೋಚರ; ಈ ವರ್ಷದಲ್ಲಿ ಸಂಭವಿಸಲಿವೆ ಐದು ಗ್ರಹಣ

Pinterest LinkedIn Tumblr

sun-new

ನವದೆಹಲಿ: ಮಾರ್ಚ್ 9 ರಂದು ಈ ವರ್ಶದ ಮೊಟ್ಟಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಬುಧವಾರ ನುಸುಕಿನ ಜಾವ 5.46ಕ್ಕೆ ಆರಂಭವಾಗುವ ಗ್ರಹಣ ಬೆಳಗಿನ ಜಾವ 6.47ಕ್ಕೆ ಮುಗಿಯಲಿದೆ.

ಪೂರ್ವಾಭಾದ್ರಾ ನಕ್ಷತ್ರ ಕುಂಭ ರಾಶಿಯಲ್ಲಿ ಕೇತುಗ್ರಹಣವು ಸಂಭವಿಸುತ್ತಿದ್ದು, ದೇಶದ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಆಗ್ನೇಯ ಏಷ್ಯಾದಲ್ಲಿ ಖಗ್ರಾಸ ಗ್ರಹಣ ಸಂಭವಿಸುತ್ತಿದ್ದು, ಪೆಸಿಫಿಕ್ ದ್ವೀಪದಲ್ಲಿ ಪೂರ್ಣ ಗ್ರಹ ದರ್ಶನವಾಗಲಿದೆ.

ಮೇ 9 ಮತ್ತು 10ರಂದು ಸೂರ್ಯನಿಗೆ ಬುಧ ಅಡ್ಡಲಾಗಿ ಹಾದು ಹೋಗುತ್ತಾನೆ. 1970ರಲ್ಲಿ ಇದೇ ರೀತಿ ಬುಧ ಸೂರ್ಯನ ಮುಂದೆ ಹಾದು ಹೋಗಿತ್ತು. ಮುಂದೆ 2095ರ ಮೇ ತಿಂಗಳಲ್ಲಿ ಸುದೀರ್ಘ ಅವಧಿಯ ಬುಧ ಗ್ರಹಣ ಸಂಭವಿಸುತ್ತದೆ.

ಸೂರ್ಯಗ್ರಹಣದ ಭಾಗಶಃ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳಲಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 6.30 ಕ್ಕೆ ಸೂರ್ಯೋದಯವಾಗಲಿದ್ದು, ಬೆಂಗಳೂರಿಗರು ಸುಮಾರು 17 ನಿಮಿಷಗಳ ಕಾಲ ವೀಕ್ಷಿಸಬಹುದಾಗಿದೆ.

ಈ ವರ್ಷದಲ್ಲಿ ಒಟ್ಟು 5 ಗ್ರಹಣ ಹಿಡಿಯಲಿದೆ. ಪೂರ್ಣ ಸೂರ್ಯಗ್ರಹಣದ ಅಪರೂಪ ಹಾಗೂ ನಯನ ಮನೋಹರ ದೃಶ್ಯಾವಳಿಗಳನ್ನು ಪ್ರಸಾರ ಮಾಡಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ’ ತೀರ್ಮಾನಿಸಿದೆ.

Write A Comment