ರಾಷ್ಟ್ರೀಯ

ಲೋಕಸಭಾ ಮಾಜಿ ಸ್ಪೀಕರ್ ಪಿಎ ಸಂಗ್ಮಾ ನಿಧನ

Pinterest LinkedIn Tumblr

Presidential hopeful P A Sangma, who is in the city as part of his campaign, today met BJP legislators.Sangma was also felicitated by Leader of Opposition in Maharashtra Assembly, Eknath Khadse at the latter's official residence in South Mumbai. in Mumbai on 10/07/2012. PIC/DATTA KUMBHAR

ನವದೆಹಲಿ: ಲೋಕಸಭೆಯ ಮಾಜಿ ಸ್ಪೀಕರ್ ಪಿಎ ಸಂಗ್ಮಾ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಸಂಗ್ಮಾ ನಿಧನರಾಗಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.

ಮೇಘಾಲಯದ ಮಾಜಿ ಮುಖ್ಯಮಂತ್ರಿಯಾಗಿದ್ದ ಸಂಗ್ಮಾ ಅವರು 8 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಸಂಸ್ಥಾಪಕರಲ್ಲಿ ಸಂಗ್ಮಾ ಕೂಡಾ ಒಬ್ಬರು. 2012ರಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಗ್ಮಾ ಪ್ರಣಬ್ ಮುಖರ್ಜಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಮೇಘಾಲಯದ ಗಾರೋ ಹಿಲ್ಸ್ ಜಿಲ್ಲೆಯಲ್ಲಿರುವ ಚಪಾಹಟಿ ಗ್ರಾಮದ ಬಡ ಕುಟುಂಬವೊಂದರಲ್ಲಿ 1947 ಸೆಪ್ಟೆಂಬರ್ 1ನೇ ತಾರೀಖಿಗೆ ಸಂಗ್ಮಾ ಜನಿಸಿದ್ದರು. ಬಡತನದಿಂದಲೇ ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿದ ಇವರು ನ್ಯಾಯವಾದಿಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಯೂತ್ ಕಾಂಗ್ರೆಸ್‌ನತ್ತ ಆಕರ್ಷಿತರಾದರು. ಸಂಜಯ್‌ಗಾಂಧಿಯ ಜತೆ ಆಪ್ತರಾಗಿದ್ದ ಇವರು ಆಮೇಲೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಗೂ ಆಪ್ತರಾಗಿ ಬಿಟ್ಟರು.

ಇಂದಿರಾ-ರಾಜೀವ್‌ರ ಸಚಿವ ಸಂಪುಟಗಳಲ್ಲಿ ಸಹಮಂತ್ರಿ, ಮೇಘಾಲಯ ಮುಖ್ಯಮಂತ್ರಿ, ನರಸಿಂಹ ರಾವ್ ಮಂತ್ರಿ ಮಂಡಲದಲ್ಲಿಯೂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ತಮ್ಮ 49ನೇ ವಯಸ್ಸಿನಲ್ಲಿ ಲೋಕಸಭಾ ಸ್ಪೀಕರ್ ಸ್ಥಾನಕ್ಕೇರಿದ ಸಂಗ್ಮಾ , ಪ್ರಸ್ತುತ ಸ್ಥಾನಕ್ಕೇರಿದ ಅತೀ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಸೋನಿಯಾ ಗಾಂಧಿ ಅವರ ವಿದೇಶ ಪೌರತ್ವವನ್ನು ಪ್ರತಿಭಟಿಸಿ ಕಾಂಗ್ರೆಸ್ ತೊರೆದ ಸಂಗ್ಮಾ 1999ರಲ್ಲಿ ಶರದ್ ಪವಾರ್ ಜತೆ ಎನ್‌ಸಿಪಿ ರಚಿಸಿದರು. ನಂತರ ಅಲ್ಲಿಂದ ಹೊರನಡೆದು ಮಮತಾ ಬ್ಯಾನರ್ಜಿ ಜತೆ ಸೇರಿ ನ್ಯಾಷನಲಿಸ್ಟ್ ತೃಣಮೂಲ ಕಾಂಗ್ರೆಸ್ ಪಕ್ಷ ರಚಿಸಿದರು. ಅಲ್ಲಿಯೂ ನಿಲ್ಲದ ಸಂಗ್ಮಾ ಎನ್‌ಸಿಪಿಗೆ ಬಂದರೂ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಎನ್‌ಸಿಪಿಗೂ ರಾಜಿನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದರು.

Write A Comment