ಮನೋರಂಜನೆ

ಸಣ್ಣ ಕತೆಗಳನ್ನು ಬರೆಯಲಿದ್ದಾಳೆ ಸನ್ನಿ ಲಿಯೋನ್

Pinterest LinkedIn Tumblr

sunny-leone

ಮುಂಬೈ: ನೀಲಿ ಚಿತ್ರ ತಾರೆಯಾಗಿದ್ದ ಸನ್ನಿ ಲಿಯೋನ್ ಬಾಲಿವುಡ್ ನಟಿಯಾಗಿ ಮಿಂಚಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಸನ್ನಿ ಲಿಯೋನ್ ಕತೆಗಾರ್ತಿಯಾಗಲು ಸಿದ್ಥತೆ ನಡೆಸಿದ್ದಾಳೆ.

ಅಂದಹಾಗೆ ಸನ್ನಿ ಬರೆಯುತ್ತಿರುವುದು ಆತ್ಮಕತೆಯೇನೂ ಅಲ್ಲ. ಆಕೆಯ ಬದುಕಿನ ಪುಟಗಳ ಬಗ್ಗೆಯೂ ಅಲ್ಲ. ಆಕೆ ಬರೆಯಲು ಹೊರಟಿರುವುದು ಸಣ್ಣ ಕತೆಗಳನ್ನು.2000 ಪದಗಳ ಮಿತಿಯಲ್ಲಿ 15 ಸಣ್ಣ ಕತೆಗಳನ್ನು ಸನ್ನಿ ಬರೆಯಲಿದ್ದಾಳೆ. ಸನ್ನಿ ಕತೆ ಬರೆಯಲಿದ್ದಾಳೆ ಎಂಬ ವಿಷಯವನ್ನು ಆಕೆಯ ಪತಿ ಡ್ಯಾನಿಯಲ್ ವೆಬರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭಾರತದ ಪ್ರಕಾಶಕರೊಬ್ಬರು ಕತೆ ಬರೆಯುವಂತೆ ಸನ್ನಿಗೆ ಹೇಳಿದ್ದು, ಅವರು ನೀಡಿದ ವಿಷಯದ ಬಗ್ಗೆ ಸನ್ನಿ ಕತೆ ಹೆಣೆಯಲಿದ್ದಾಳೆ. ಶೀಘ್ರದಲ್ಲೇ ಈ ಕಥಾ ಸಂಕಲನವನ್ನು ಬಿಡುಗಡೆಯಾಗಲಿದ್ದು, ಕತೆಗಳು ಆನ್‌ಲೈನ್ ನಲ್ಲಿ ಲಭ್ಯವಾಗಲಿವೆ ಎಂದು ವೆಬರ್ ಹೇಳಿದ್ದಾರೆ.

Write A Comment