ರಾಷ್ಟ್ರೀಯ

ಇಶ್ರತ್ ಜಹಾನ್ ಸಾವು ಪೂರ್ವ ನಿರ್ಧರಿತ ಕೊಲೆ: ಕೊನೆಗೂ ಮೌನ ಮುರಿದ ವಿಶೇಷ ತನಿಖಾ ತಂಡದ ಸದಸ್ಯ ಐಪಿಎಸ್ ಅಧಿಕಾರಿ ಸತೀಶ್ ವರ್ಮ

Pinterest LinkedIn Tumblr

Ishrat Jahan, IPS officer Satish Verma

ನವದೆಹಲಿ: 2004ರ ಗುಜರಾತ್ ನ ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಒಂದು ಪೂರ್ವ ಯೋಜಿತ ಕೊಲೆ ಎಂದು ವಿಶೇಷ ತನಿಖಾ ತಂಡದ ಸದಸ್ಯ ಐಪಿಎಸ್ ಅಧಿಕಾರಿ ಸತೀಶ್ ವರ್ಮ ಹೇಳಿದ್ದಾರೆ.

19 ವರ್ಷದ ಕಾಲೇಜು ಅಪಮದಾಬಾದ್ ಮೂಲದ ಕಾಲೇಜು ವಿದ್ಯಾರ್ಥಿನಿ ಇಶ್ರತ್ ಮತ್ತು ಇತರ ಮೂವರನ್ನು ಜೂನ್ 2004ರಲ್ಲಿ ಅಹಮದಾಬಾದ್ ನಲ್ಲಿ ಭದ್ರತಾ ಪಡೆ ಎನ್ ಕೌಂಟರ್ ಗೆ ಒಂದು ದಿನಕ್ಕೆ ಮುಂಚೆ ಅಪಹರಿಸಿ ಗುಂಡಿಟ್ಟು ಸಾಯಿಸಿದರು ಎಂದು ವರ್ಮ ಹೇಳಿದರು.

ಲಷ್ಕರ್ -ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದಾರೆ ಎಂಬ ಆರೋಪದ ಮೇಲೆ ಇಶ್ರತ್ ಮತ್ತು ಇತರ ಮೂವರನ್ನು ಜೂನ್ 15, 2004ರಲ್ಲಿ ಅಹಮದಾಬಾದ್ ನ ಹೊರವಲಯದಲ್ಲಿ ಹತ್ಯೆ ಮಾಡಲಾಗಿತ್ತು.

ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಆರ್ ವಿಎಸ್ ಮಣಿಯವರ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಇದೊಂದು ತಪ್ಪಾದ ಮತ್ತು ಆಧಾರರಹಿತ ಆರೋಪವಾಗಿದ್ದು, ಕೇಸನ್ನು ದುರ್ಬಲಗೊಳಿಸಲು ಹೀಗೆ ಆರೋಪ ಮಾಡುತ್ತಿದ್ದಾರೆ. ಇವರ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ. ಇಶ್ರತ್ ಜಹಾನ್ ಲಷ್ಕರ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿದ್ದಾರೆ.

ಈ ಸಂಬಂಧ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಹಲವು ಸಿಬಿಐ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಕೇಸುಗಳಿಂದ ಗಮನವನ್ನು ಬೇರೆಡೆಗೆ ಹರಿಸುವುದು ಅವರ ಉದ್ದೇಶವಾಗಿದೆ. ಆರೋಪಟ್ಟಿಯಲ್ಲಿರುವ ಸತ್ಯಾಸತ್ಯತೆಯನ್ನು ನಾಶಪಡಿಸಿ ಸಾಕ್ಷ್ಯಾಧಾರಗಳನ್ನು ನಾಶಪಡಿಸುವುದು ಅವರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ತಮಗೆ ಒತ್ತಡ ಮತ್ತು ಹಿಂಸೆ ನೀಡಲಾಗಿದೆ ಎಂದು ಆರ್ ವಿಎಸ್ ಮಣಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವರ್ಮ, ಆರೋಪವನ್ನು ಪುರಸ್ಕರಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಎರಡನೆಯದಾಗಿ ಪೊಲೀಸರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಾಗ, ಅವರು ಸಹಿಗಳನ್ನು ತೆಗೆದುಕೊಳ್ಳುವುದಿಲ್ಲ. ಆರ್ ವಿಎಸ್ ಮಣಿಯವರು ಕೂಡ ಪ್ರಮುಖ ಸಾಕ್ಷಿಯಾಗಿದ್ದು, ಅವರನ್ನು ಸಹಿ ಹಾಕುವಂತೆ ಒತ್ತಡ ಹೇರುವ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಮಾಜಿ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೈ ಮತ್ತು ಇತರ ಮಾಜಿ ಅಧಿಕಾರಿಗಳು ಕೆಲವು ವಾರಗಳ ಹಿಂದೆ, ಭದ್ರತಾ ದಳ ಎನ್ ಕೌಂಟರ್ ನ್ನು ಯಶಸ್ವಿಯಾಗಿ ನಡೆಸಿತ್ತು ಎಂದು ಪ್ರತಿಪಾದಿಸಿದ ಹಿನ್ನಲೆಯಲ್ಲಿ ಐಪಿಎಸ್ ಅಧಿಕಾರಿ ಸತೀಶ್ ವರ್ಮ ಅವರ ಹೇಳಿಕೆ ಮಹತ್ವ ಪಡೆದಿದೆ.

Write A Comment