ರಾಷ್ಟ್ರೀಯ

ಸಂಸತ್ತು ದಾಳಿಯಲ್ಲಿ ಅಫ್ಜಲ್ ಗುರುವಿನ ಪಾತ್ರದ ಬಗ್ಗೆ ಸಂಶಯವಿದೆ: ಚಿದಂಬರಂ

Pinterest LinkedIn Tumblr

P-Chidambaram1

ನವದೆಹಲಿ: ಮರಣದಂಡನೆಗೆ ಗುರಿಯಾಗಿದ್ದ ಭಯೋತ್ಪಾದಕ ಅಫ್ಜಲ್ ಗುರುವನ್ನು ಬೆಂಬಲಿಸಿ ಜೆಎನ್ ಯು ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮ ದೇಶಾದ್ಯಂತ ವಿವಾದದ ಬಿರುಗಾಳಿಯನ್ನು ಎಬ್ಬಿಸಿದ್ದು, ಇದೀಗ ಮಾಜಿ ಗೃಹ ಸಚಿವ ಪಿ.ಚಿದಂಬರಂ ಹೇಳಿಕೆಯೊಂದನ್ನು ನೀಡಿ ವಿವಾದಕ್ಕೆ ಕಿಡಿ ಹತ್ತಿಸಿದ್ದಾರೆ. 2001ರ ಸಂಸತ್ತು ದಾಳಿಯಲ್ಲಿ ಅಫ್ಜಲ್ ಗುರುವಿನ ಪಾತ್ರ ಎಷ್ಟರ ಮಟ್ಟಿಗೆ ಇತ್ತು ಎಂಬ ಬಗ್ಗೆ ಸಂಶಯ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಮುಖ ಇಂಗ್ಲಿಷ್ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಅಫ್ಜಲ್ ಗುರುವಿನ ಕೇಸನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಪ್ರಾಮಾಣಿಕವಾಗಿ ನಾನು ಹೇಳುತ್ತೇನೆ ಎಂದು ಹೇಳಿದ್ದಾರೆ.

”ಆಗ ನಾನು ಸರ್ಕಾರದ ಭಾಗವಾಗಿದ್ದೆ. ಸರ್ಕಾರದಲ್ಲಿದ್ದುಕೊಂಡು ನ್ಯಾಯಾಲಯ ಕೇಸನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ವೈಯಕ್ತಿಕವಾಗಿ ನನಗೆ ಆ ಕೇಸನ್ನು ನಿಭಾಯಿಸಿದ್ದು ಸರಿಕಾಣಲಿಲ್ಲ. ಚಿದಂಬರಂ ಅವರು ಯುಪಿಎ-2 ಅವಧಿಯಲ್ಲಿ ಗೃಹ ಹಾಗೂ ಹಣಕಾಸು ಖಾತೆಯನ್ನು ವಹಿಸಿದ್ದರು.

ಈಗ ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಅಫ್ಜಲ್ ಗುರುವಿನ ಪರ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಐವರು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಿರುವುದು ಎಲ್ಲವನ್ನೂ ನೋಡಿದಾಗ, ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಕೇಸು ದಾಖಲಿಸುವುದು ಕೂಡ ತಪ್ಪಾಗುತ್ತದೆ. ಎಂದರು.

ಜೆಎನ್ ಯು ವಿವಾದ ದೇಶವನ್ನು ಇಬ್ಭಾಗ ಮಾಡಿದ್ದು, ಕೆಲವರು ಬಂಧಿತಗೊಂಡಿರುವ ಐವರು ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರೆ, ಇನ್ನು ಹಲವರು ವಿದ್ಯಾರ್ಥಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

2001ರ ಸಂಸತ್ತು ದಾಳಿಗೆ ಸಂಬಂಧಪಟ್ಟಂತೆ ಅಫ್ಜಲ್ ಗುರುವಿಗೆ ಮರಣದಂಡನೆ ಶಿಕ್ಷೆ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಸಂಸತ್ತು ದಾಳಿಯಲ್ಲಿ ಆರು ಮಂದಿ ಪೊಲೀಸ್ ಅಧಿಕಾರಿಗಳು, ಇಬ್ಬರು ಸಂಸತ್ತು ಭದ್ರತಾ ಸಿಬ್ಬಂದಿ ಮತ್ತು 5 ಮಂದಿ ಜೈಶ್-ಇ-ಮೊಹಮ್ಮದ್ ಉಗ್ರರು ಸಾವನ್ನಪ್ಪಿದ್ದರು. ಅಫ್ಜಲ್ ಗುರುವನ್ನು ಫೆಬ್ರವರಿ 9, 2013ರಲ್ಲಿ ಮರಣದಂಡನೆಗೆ ಗುರಿಪಡಿಸಲಾಗಿತ್ತು.

Write A Comment