ರಾಷ್ಟ್ರೀಯ

ಹರ್ಯಾಣದ ರೊಹ್ ಟಕ್ ನಲ್ಲಿ ಮತ್ತೆ ಹಿಂಸಾಚಾರ; ರಾಷ್ಟ್ರೀಯ ಹೆದ್ದಾರಿ ತಡೆ

Pinterest LinkedIn Tumblr

haryana-strike-violence

ನವದೆಹಲಿ/ ರೋಹ್ ಟಕ್: ಇಂದು ಬೆಳಗ್ಗೆ ಪ್ರತಿಭಟನೆ ನಿಲ್ಲಿಸಿದ್ದ ಜಾಟ್ ಸಮುದಾಯದವರು ಈಗ ಮತ್ತೆ ಆರಂಭಿಸಿದ್ದಾರೆ. ರೊಹ್ ಟಕ್ ಮತ್ತು ಸೋನೆಪತ್ ನಲ್ಲಿ ಹಿಂಸಾಕೃತ್ಯ ನಡೆಸಿದ ಸುದ್ದಿ ಬಂದಿದ್ದು, ಕೆಲವು ಭಾಗಗಳಲ್ಲಿ ರಸ್ತೆ ತಡೆ ನಡೆಸಿದ್ದಾರೆ.

ದೆಹಲಿ-ಅಂಬಲಾ ಹೆದ್ದಾರಿಯ ಸಂಚಾರವನ್ನು ಮತ್ತೆ ಮುಚ್ಚಲಾಗಿದೆ. ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ರಾಜ್ಯ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ 12 ಮಂದಿ ಸಾವನ್ನಪ್ಪಿ 150 ಮಂದಿ ಗಾಯಗೊಂಡಿದ್ದಾರೆ.

ಇದೀಗ ಬಹದ್ದೂರ್ ಘರ್ ನಲ್ಲಿ ಜಾಟ್ ಮುಖಂಡರ ಸಭೆ ನಡೆಯುತ್ತಿದೆ. ಅಲ್ಲಿ ಪ್ರತಿಭಟನೆಯನ್ನು ಮುಂದುವರಿಸಬೇಕೆ ಅಥವಾ ಹಿಂತೆಗೆದುಕೊಳ್ಳಬೇಕೆ ಎಂಬುದು ನಿರ್ಧಾರವಾಗಲಿದೆ. ಹರ್ಯಾಣ ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳಡಿಯಲ್ಲಿ ಜಾಟ್ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಲು ಬಿಜೆಪಿ ಸರ್ಕಾರ ಒಪ್ಪಿಕೊಂಡಿತ್ತು. ಹಾಗಾಗಿ ಇಂದು ಬೆಳಗ್ಗೆ ಪ್ರತಿಭಟನೆ ಸ್ಥಗಿತಗೊಂಡಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಮತ್ತೆ ಆರಂಭಿಸಿದ ಪ್ರತಿಭಟನಾಕಾರರು ಲಿಖಿತ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದೆ. ಕರ್ಫ್ಯೂ ವಿಧಿಸಲಾಗಿದ್ದರೂ ಕೂಡ ರೊಹ್ ಟಕ್ ನಲ್ಲಿ ನ್ಯಾಯಾಧೀಶರೊಬ್ಬರ ಕಾರಿಗೆ ಬೆಂಕಿ ಹಚ್ಚಲಾಗಿದೆ.

ಸೋನೆಪತ್ ನಲ್ಲಿ ಮತ್ತೆ ಹಿಂಸಾಚಾರ ಆರಂಭಗೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿ-1ನ್ನು ಮುಚ್ಚಲಾಗಿದೆ. ಹಿಸ್ಸಾರ್ ಮತ್ತು ಜಿಂದ್ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 10ನ್ನು ಕೂಡ ಸಂಪೂರ್ಣವಾಗಿ ಮುಚ್ಚಲಾಗಿದೆ. ಇಂದು ಕೂಡ ಶಾಲಾ ಕಾಲೇಜು ಮುಚ್ಚಲಾಗಿದೆ. ರೊಹ್ ಟಕ್, ಬಿವನಿ, ಜಜ್ಝರ್ ಮತ್ತು ಸೋನಿಪತ್ ನಲ್ಲಿ ಕರ್ಫ್ಯೂ ಹೇರಲಾಗಿದೆ.

ಜಾಟ್ ಸಮುದಾಯದವರ ಬೇಡಿಕೆ: ವಿಶೇಷ ವರ್ಗ ಎಂದರೇನು ಎಂದು ಸರ್ಕಾರ ತಿಳಿಸಬೇಕು ಎಂಬುದು ಜಾಟ್ ಸಮುದಾಯದವರ ಒತ್ತಾಯ. ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು.

Write A Comment