ರಾಷ್ಟ್ರೀಯ

ಜಮ್ಮು ಕಾಶ್ಮೀರ ಶಾಸಕನ ಮೇಲೆ ಬಲಪಂಥೀಯ ಗುಂಪುಗಳ ಹಲ್ಲೆ

Pinterest LinkedIn Tumblr

Engineer-Rashid

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ಎಂಜಿನಿಯರ್ ರಶೀದ್ ಅವರ ಮೇಲೆ, ಜಮ್ಮು ಪ್ರದೇಶದ ರಜೌರಿ ಜಿಲ್ಲೆಯಲ್ಲಿ ಶನಿವಾರ ಬಲಪಂಥೀಯ ಗುಂಪುಗಳು ದಾಳಿ ಮಾಡಿವೆ.

“ಭಜರಂಗ ದಳ ಮತ್ತು ವಿ ಎಚ್ ಪಿ ಕಾರ್ಯಕರ್ತರು ರಜೌರಿ ಜಿಲ್ಲೆಯ ಭಾಮ್ಲಾದಲ್ಲಿ ನನ್ನನ್ನು ಕೊಲೆ ಮಾಡುವ ಸಲುವಾಗಿ ಮಾರಣಾಂತಿಕ ಹಲ್ಲೆ ನಡೆಸಿದರು” ಎಂದು ರಶೀದ್ ಹೇಳಿದ್ದಾರೆ.

“ನಾನು ಚಲಿಸುತ್ತಿದ್ದ ವಾಹನದ ಕಿಟಕಿಯನ್ನು ಅವರಿ ಮುರಿದರು. ನನ್ನ ಮೇಲೆ ಮಸಿಯನ್ನು ಎರಚಲು ಕೂಡ ಪ್ರಯತ್ನಿಸಿದರೂ, ಆದರೆ ಅದು ಹಾನಿಗೊಳಗಾದ ವಾಹನದ ಮೇಲೆ ಬಿದ್ದಿತು” ಎಂದು ಶಾಸಕ ವರದಿಗಾರರಿಗೆ ಹೇಳಿದ್ದಾರೆ.

ಕಳೆದ ವರ್ಷ ಶ್ರೀನಗರದ ಶಾಸಕರ ಭವನದಲ್ಲಿ ಭೀಪ್ ಔತಣಕೂಟವನ್ನು ಆಯೋಜಿಸಿದ್ದಕೆ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಅವರ ಮೇಲೆ ಹಲ್ಲೆ ಮಾಡಿದ್ದರು.

Write A Comment