ರಾಷ್ಟ್ರೀಯ

ಜೆಎನ್‌ಯು ವಿದ್ಯಾರ್ಥಿ ಉಮರ್ ತಂದೆಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ

Pinterest LinkedIn Tumblr

umar_ravipoojari

ನವದೆಹಲಿ: ಜವಾಹರ್‌ಲಾಲ್ ವಿಶ್ವವಿದ್ಯಾನಿಲಯದಲ್ಲಿ ವಿವಾದಿತ ಕಾರ್ಯಕ್ರಮದ ಸೂತ್ರದಾರ ಎಂದೇ ಹೇಳಲಾಗುವ ಡೆಮಾಕ್ರಟಿಕ್ ವಿದ್ಯಾರ್ಥಿ ಸಂಘಟನೆ(ಡಿಎಸ್‌ಯು) ಮಾಜಿ ಸದಸ್ಯ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಅವರ ತಂದೆಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿದೆಯಂತೆ.

ತಮ್ಮ ಮಗನನ್ನು ಕೊಲ್ಲುವುದಾಗಿ ರವಿ ಪೂಜಾರಿ ಬೆದರಿಕೆ ಹಾಕಿದ್ದಾರೆ ಎಂದು ಉಮರ್ ಖಲೀದ್ ತಂದೆ ಸಯ್ಯದ್ ಕಾಸೀಮ್ ರಸೂಲ್ ಅವರು ಜಾಮೀಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಮರ್ ಖಾಲಿದ್ ದೇಶವನ್ನು ಬಿಟ್ಟು ಹೋಗದಿದ್ದರೇ ಆತನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಸಂಜೆ 5 ಗಂಟೆಗೆ ಕರೆ ಬಂದಿತ್ತು. ನಾನು ಮುಂಬೈ ಮೂಲದ ಭೂಗತ ಪಾತಕಿ ರವಿ ಪೂಜಾರಿ ಎಂದು ತಿಳಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಉಮರ್ ಕಿರಿಯ ಸಹೋದರಿಗೂ ಬೆದರಿಕೆ ಹಾಕಲಾಗಿತ್ತು ಎಂದು ಉಮರ್ ಸಹೋದರಿ ಫಾತೀಮಾ ತಿಳಿಸಿದ್ದು, ತಮ್ಮ ಕುಟುಂಬಕ್ಕೆ ಭದ್ರತೆ ನೀಡಬೇಕೆಂದು ಕೇಳಿಕೊಂಡಿದ್ದಾರೆ.

ದೂರಿನ ಬಗ್ಗೆ ಪರಿಶೀಲನೆ ನಡೆಸಿದ ನಂತರ ಎಫ್ ಐಆರ್ ದಾಖಲಿಸಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಫೆ.9ರಂದು ಡೆಮೊಕ್ರಾಟಿಕ್ ಸ್ಟೂಡೆಂಟ್ಸ್ ಯೂನಿಯನ್ (ಡಿಎಸ್‌ಯು) ಕಾರ್ಯಕರ್ತರು ಉಮರ್ ಖಾಲೀದ್ ನೇತೃತ್ವದಲ್ಲಿಯೇ ಅಫ್ಜಲ್‌ಗುರು ಪರವಾದ ಹಾಗೂ ದೇಶ ವಿರೋಧಿ ಘೋಷಣೆಗಳನ್ನು ಹಾಕಿದ್ದರು ಎಂದು ದೆಹಲಿ ಪೊಲೀಸರು ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದರು. ತದ ನಂತರದಿಂದ ಉಮರ್ ಖಾಲೀದ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಡುತ್ತಿದ್ದಾರೆ.

Write A Comment