ನವದೆಹಲಿ: ಭಾರತದ ಸ್ವದೇಸಿ ಮೊಬೈಲ್ ತಯಾರಿಕೆ ಕಂಪನಿ ರಿಂಗಿಂಗ್ ಬೆಲ್ಸ್ ಸದ್ಯದಲ್ಲೆ 500 ರೂ ಗೆ ಸ್ಮಾರ್ಟ್ ಫೋನ್ನ್ನು ವಾರಾಂತ್ಯದ ವೇಳೆಗೆ ಬಿಡುಗಡೆಗೊಳಿಸುವ ತಯಾರಿಯಲ್ಲಿದೆ.
ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನದ ಸರ್ವರಿಗೂ ಸಮಾನಾವಕಾಶ ಮತ್ತು ದೇಶ ಅಭಿವೃದ್ದಿ ಘೊಷಣೆಯಿಂದ ಪ್ರೇರಿತರಾಗಿ ಈ ಫೋನ್ ನಿರ್ಮಿಸಲಾಗಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಫೆಬ್ರವರಿ 17 ರಂದು ‘ಫ್ರೀಡಮ್ 251’ ಹೆಸರಿನ ಫೋನನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ನೋಯ್ಡಾ ಮೂಲದ ಕಂಪನಿ ತಿಳಿಸಿದೆ.
ಪ್ರಸ್ತುತ ಮಾರುಕಟ್ಟೆಯಲಿ 1500 ರೂ.ಗಳಿಗೆ ಸ್ಮಾರ್ಟ್ ಫೋನ್ಗಳು ಲಭ್ಯವಿದೆ. ಕಳೆದ ವರ್ಷ ಅನಿಲ್ ಅಂಬಾನಿ ಒಡೆತನದ ರಿಲಾಯನ್ಸ್ ಕಮ್ಯೂನಿಕೇಷನ್ಸ್ 999 ರೂ ಗೆ ಸ್ಮಾರ್ಟ್ ಫೋನ್ ತಯಾರಿಸುವುದಾಗಿ ಹೇಳಿಕೊಂಡಿತ್ತು ಆದರೆ ಇದುವರೆಗೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ರಿಂಗಿಂಗ್ ಬೆಲ್ಸ್ ಕಂಪನಿಯ 4ಜಿ ಫೋನ್ಗಳು ಮಾರುಕಟ್ಟೆಯಲ್ಲಿ 3 ಸಾವಿರ ಬೆಲೆಯಿಂದ ಲಭ್ಯವಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಪೋನ್ ಬಳಕೆಯಲ್ಲಿ ಸದ್ಯದಲ್ಲೆ ಭಾರತ ಅಮೆರಿಕವನ್ನು ಹಿಂದಿಕ್ಕಲಿದೆ.