
ನವದೆಹಲಿ: ಗುಜರಾತ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೆಷನರಿ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ವ್ಯಾಲೆಂಟೈನ್ಸ್ ಡೇ ಆಚರಿಸಲು ಸಾಲ ನೀಡಿ ಎಂದು ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದಾರೆ.
25ರ ಹರೆಯದ ದಿಗ್ವಿಜಯ್ ಸಿಂಗ್ ತನಗೆ ವ್ಯಾಲೆಂಟೈನ್ಸ್ ಡೇ ಆಚರಿಸಲು ರು. 42, 970 ನಸಾಲ ನೀಡಬೇಕೆಂದು ಎಸ್ಬಿಐಗೆ ಅರ್ಜಿಸಲ್ಲಿಸಿದ್ದರು. ಆದರೆ ಇದೊಂದು ಮಾನ್ಯತೆಯಿರುವ ಹಬ್ಬವಲ್ಲ ಎಂದು ಹೇಳಿ ಎಸ್ಬಿಐ ಅರ್ಜಿಯನ್ನು ತಳ್ಳಿದೆ.
ಈ ಹಿಂದೆ ವಸಂತ ಪಂಚಮಿ ಆಚರಣೆಗಾಗಿ ಮುಂಗಡ ಸಂಬಳ ನೀಡಬೇಕೆಂದು ಸಿಂಗ್ ಅರ್ಜಿ ಸಲ್ಲಿಸಿದ್ದು, ಬ್ಯಾಂಕ್ ಅದನ್ನು ಪರಿಗಣಿಸಿತ್ತು. ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ ಸಿಂಗ್, ನಾನು ಪ್ರಚಾರಕ್ಕೋಸ್ಕರ ಈ ಅರ್ಜಿ ಸಲ್ಲಿಸಿಲ್ಲ. ಬ್ಯಾಂಕ್ ನ ನಿರ್ಧಾರದ ಬಗ್ಗೆಯೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.