ಖೆಮ್ ಕರಣ್ (ಪಂಜಾಬ್): ಪಾಕಿಸ್ತಾನದಿಂದ ಭಾರತಕ್ಕೆ ಮಾದಕ ವಸ್ತುಗಳನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಬಿಎಸ್ಎಫ್ ಯೋಧರು ಭಾನುವಾರ ಹತ್ಯೆ ಮಾಡಿದ್ದಾರೆ.
ಪಂಜಾಬಿನ ಖೆಮ್ ಕರಣ್ ಪ್ರಾಂತ್ಯದ ಬಳಿ ಪಾಕಿಸ್ತಾನದ ಗಡಿಯಿಂದ ಭಾರತಕ್ಕೆ ಹೆರಾಯಿನ್ ಗಳನ್ನು ಸಾಗಿಸಲು ನಾಲ್ವರು ಯತ್ನ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಬಿಎಸ್ಎಫ್ ಯೋಧರು ಕಾರ್ಯಾಚರಣೆ ನಡೆಸಿ ನಾಲ್ವರನ್ನೂ ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ. ಹತ್ಯೆ ಮಾಡಿದ ನಾಲ್ವರಲ್ಲಿ ಇಬ್ಬರು ಪಾಕಿಸ್ತಾನಿಗಳು ಹಾಗೂ ಇಬ್ಬರು ಭಾರತೀಯರು ಎಂದು ಹೇಳಲಾಗುತ್ತಿದೆ.
ಸಾವನ್ನಪ್ಪಿದ ನಾಲ್ವರು ಅಂತರಾಷ್ಟ್ರೀಯ ಸ್ಮಗ್ಲರ್ ಗಳು ಎಂದು ಹೇಳಲಾಗುತ್ತಿದ್ದು, ನಾಲ್ವರು 10 ಕೆ.ಜಿ ಹೆರಾಯನ್ ಗಳನ್ನು ಭಾರತಕ್ಕೆ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದರು. ಇದೀಗ ನಾಲ್ವರನ್ನು ಹತ್ಯೆ ಮಾಡಿರುವ ಯೋಧರು ರು. 50 ಕೋಟಿ ಮೌಲ್ಯದ ಹೆರಾಯಿನ್’ನ್ನು ವಶ ಪಡಿಸಿಕೊಂಡಿದ್ದಾರೆ.