ನವದೆಹಲಿ(ಪಿಟಿಐ): ರಾಷ್ಟ್ರದ ವಿವಿಧೆಡೆ ಬಂಧಿಸಲಾಗಿರುವ 11 ಶಂಕಿತ ಉಗ್ರರನ್ನು ದೆಹಲಿ ನ್ಯಾಯಾಲಯ ಏಳು ದಿನಗಳ ವರೆಗೆ ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ವಶಕ್ಕೆ ನೀಡಿದೆ.
ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರ ಗುಂಪು ಸೇರ್ಪಡೆಗೆ ಪ್ರಚೋದನೆ, ಹಣಕಾಸು ನೆರವು ಹಾಗೂ ಅವರೊಟ್ಟಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ದೇಶದ ವಿವಿಧೆಡೆ ಈ ಶಂಕಿತರನ್ನು ಬಂಧಿಸಲಾಗಿತ್ತು.
ಎನ್‌ಐಎ ಶಂಕಿತರನ್ನು ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನ ವಶಕ್ಕೆ ನೀಡುವಂತೆ ಕೋರಿತ್ತು. ಆದರೆ, ನ್ಯಾಯಾಲಯ ಏಳು ದಿನ ಎನ್‌ಐಎ ವಶಕ್ಕೆ ನೀಡಿದೆ.