ಮೊರೆನಾ: ಭಾರತದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ಮುಸ್ಲಿಮರು ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ನೀಡಿ ಸುದ್ದಿಯಾಗಿದ್ದರು. ಇದೇ ಮಾದರಿಯಲ್ಲಿ ಮಧ್ಯಪ್ರದೇಶದಲ್ಲೂ ಮುಸ್ಲಿಮರು ರಾಮಮಂದಿರ ನಿರ್ಮಾಣಕ್ಕೆ ಭೂಮಿಯನ್ನು ದಾನ ಮಾಡಿದ್ದಾರೆ.
ಮೊರೆನಾ ಜಿಲ್ಲೆಯ ಗ್ರಾಮವೊಂದರಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮ್ ಜಾನಕಿ ದೇವಾಲಯಕ್ಕೆ ಮುಸ್ಲಿಂ ಸಮುದಾಯದವರು ಭೂಮಿಯನ್ನು ನೀಡಿದ್ದೂ ಅಲ್ಲದೇ 50 ಸಾವಿರ ರೂ ದೇಣಿಗೆ ನೀಡಿದ್ದಾರೆ. ಗ್ರಾಮದಲ್ಲಿ 80 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬದವರಿದ್ದು, ಎಲ್ಲರೂ ಒಮ್ಮತದಿಂದ ಭೂಮಿ ದಾನ ಮಾಡಲು ಮುಂದಾಗಿದ್ದಾರೆ. “ಮುಸ್ಲಿಂ ಸಹೋದರರು ದೇವಾಲಯ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲೂ ಸಹಕರಿಸಿದ್ದಾರೆ” ಎಂದು ಗ್ರಾಮದ ಮುಖ್ಯಸ್ಥ ಖೇಡಕಲಾ ಗ್ರಾಮದ ಮುಖ್ಯಸ್ಥ ಸಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.