ರಾಯಗಢ್: ಪ್ರವಾಸಕ್ಕೆಂದು ತೆರಳಿದ್ದ ಪುಣೆ ಕಾಲೇಜು ವಿದ್ಯಾರ್ಥಿಗಳ ಪೈಕಿ 14 ಮಂದಿ ಮಹಾರಾಷ್ಟ್ರ ರಾಯಗಢ್ ಬಳಿ ಇರುವ ಮುರುಡ್ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ರಾಯಗಢದ ಅಲಿಭಾಗ್ ಬಳಿಯ ಮುರುಡ್ ಬೀಚ್ ಗೆ ಅಬೇದ ಇನ್ಮಾದಾರ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 130 ಮಂದಿ ವಿದ್ಯಾರ್ಥಿಗಳು ಮಹಾರಾಷ್ಟ್ರದ ಐತಿಹಾಸಿಕ ಜಂಜಿರಾ ಪೋರ್ಟ್ ನೋಡಲು ಹೋಗಿದ್ದರು. ಈ ವೇಳೆ ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಿದ್ದಾರೆ. ಅಲೆಗಳ ರಭಸಕ್ಕೆ 3 ವಿದ್ಯಾರ್ಥಿನಿಯರು ಸೇರಿ 14 ಮಂದಿ ಮುಳುಗಿ ಸಾವನ್ನಪ್ಪಿದ್ದಾರೆ.
ಕೂಡಲೇ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಕೆಲ ಮೃತದೇಹಗಳನ್ನು ಹೊರ ತೆಗೆದಿದ್ದು, ಇನ್ನುಳಿದ ಮೃತದೇಹಗಳಿಗಾಗಿ ಮೀನುಗಾರರ ನೆರವಿನೊಂದಿಗೆ ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.