ರಾಷ್ಟ್ರೀಯ

ದೂರು, ಬೇಡಿಕೆ,ಪ್ರತಿಭಟನೆ ಮುಂದುವರಿಸೋಣ: ಪ್ರಣಬ್ ಮುಖರ್ಜಿ

Pinterest LinkedIn Tumblr

gana-newನವದೆಹಲಿ: ಭಯೋತ್ಪಾದನೆಯಲ್ಲಿ ಒಳ್ಳೆಯದ್ದು, ಕೆಟ್ಟದ್ದು ಎಂಬುದಿಲ್ಲ, ಭಯೋತ್ಪಾದನೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದ್ದಾರೆ.

67ನೇ ಗಣರಾಜ್ಯೋತ್ಸವದ ಅಂಗವಾಗಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಣಬ್ ಮುಖರ್ಜಿ, ಗುಂಡಿನ ಸುರಿಮಳೆ ಕೆಳಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದರು. 2015 ರಲ್ಲಿ ಭಾರತಕ್ಕೆ ಅನೇಕ ಸವಾಲುಗಳು ಎದುರಾದವು, ಎಲ್ಲ ಸಮಸ್ಯೆಗಳನ್ನು ಎದುರಿಸಿ ಭಾರತ ವಿಶ್ವ ನಾಯಕನಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

ಯಾವುದೇ ಕಾರಣಕ್ಕೂ ದೇಶದಲ್ಲಿ ಬೇಧ ಭಾವವಿಲ್ಲ, ಎಲ್ಲರೂ ಒಂದೇ ಎಂದು ಹೇಳಿದ ಪ್ರಣಬ್ ಮುಖರ್ಜಿ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಫ್ ಇಂಡಿಯಾದಿಂದ ಸಂಶೋಧನೆಯಲ್ಲಿ ಪ್ರಗತಿ ಹೊಂದಲಾಗಿದೆ. ಇದೇ ರೀತಿ ಅಭಿವೃದ್ಧಿ ಮುಂದುವರಿದರೇ ಇನ್ನು 20 ವರ್ಷದಲ್ಲಿ ದೇಶದ ಬಚತನ ನಿರ್ಮೂವಲನೆಯಾಗುತ್ತದೆ ಎಂದು ಪ್ರಣಬ್ ಮುಖರ್ಜಿ ತಿಳಿಸಿದರು.

2015 ರಲ್ಲಿ ದೇಶ ಅನೇಕ ಪ್ರಾಕೃತಿಕ ವಿಕೋಪಗಳನ್ನು ಎದರಿಸಿದೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಿದೆ ಎಂದು ಹೇಳಿದ ಪ್ರಣಬ್ ಮುಖರ್ಜಿ, ದೂರು, ಬೇಡಿಕೆ, ಪ್ರತಿಭಟನೆ ಗಳನ್ನು ಮುಂದುವರಿಸೋಣ ಎಂದು ಹೇಳಿದರು. ದೇಶಕ್ಕಾಗಿ ಹೋರಾಟ ನಡೆಸುತ್ತಿರುವ ಸೈನಿಕರಿಗೆ ರಾಷ್ಟ್ರಪತಿಗಳು ನಮನ ಸಲ್ಲಿಸಿದರು.

Write A Comment