ರಾಷ್ಟ್ರೀಯ

ಕೇರಳ ಬಾರ್ ಲಂಚ ಪ್ರಕರಣ, ಸಚಿವ ಕೆ.ಬಾಬು ತಲೆದಂಡ

Pinterest LinkedIn Tumblr

babu-barತಿರುವನಂತಪುರ: ಕೇರಳ ಬಾರ್ ಭ್ರಷ್ಟಾಚಾರ ಹಗರಣ ಇನ್ನೊಬ್ಬ ಸಚಿವನ ತಲೆದಂಡ ಪಡೆದಿದೆ. ಬಾರ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಕರಣ ದಾಖಲಿಸುವಂತೆ ವಿಚಕ್ಷಣ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ವಿಎಸಿಬಿ) ತ್ರಿಶ್ಯೂರ್ ನ್ಯಾಯಾಲಯವು ಆದೇಶ ನೀಡಿದ ಹಿನ್ನೆಲೆಯಲ್ಲಿ ಕೇರಳದ ಅಬಕಾರಿ ಸಚಿವ ಕೆ. ಬಾಬು ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಾಯಕರಾಗಿರುವ ಬಾಬು ಅವರು ಬಾರ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿರುವ ಎರಡನೇ ಸಚಿವರಾಗಿದ್ದಾರೆ. ಇತ್ತೀಚೆಗೆ ಹಣಕಾಸು ಸಚಿವ ಕೆ.ಎಂ. ಮಣಿ ಅವರು ಬಾರ್ ಲಂಚ ಆರೋಪದ ಕಾರಣ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ತ್ರಿಶ್ಯೂರಿನ ವಿಚಕ್ಷಣಾ ನ್ಯಾಯಾಲಯವು ಶನಿವಾರ ಅಬಕಾರಿ ಸಚಿವ ಕೆ. ಬಾಬು ವಿರುದ್ಧ ಬಾರ್ ಲಂಚ ಹಗರಣ ಸಂಬಂಧ ಪ್ರಕರಣ ದಾಖಲಿಸುವಂತೆ ಶನಿವಾರ ವಿಚಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಿರ್ದೇಶನ ನೀಡಿತು. ಸಚಿವ ಬಾಬು ಅವರು ಬಾರ್ ಮಾಲೀಕ ಬಿಜು ರಮೇಶ್ ಅವರಿಂದ ಲಿಕ್ಕರ್ ಲೈಸೆನ್ಸ್ ನವೀಕರಿಸಲು 50 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಪ್ರಕರಣದ ವಿಚಾರಣೆ ಕಾಲದಲ್ಲಿ ನ್ಯಾಯಾಲಯ ‘ಅಪರಾಧ ಅಪರಾಧವೇ, ಬಾಬು ವಿರುದ್ಧವೂ ಪ್ರಕರಣ ದಾಖಲಿಸಿ’ ಎಂದು ಆಜ್ಞಾಪಿಸಿತು.

Write A Comment