ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧ ಪಟ್ಟ ಮಹತ್ವದ ದಾಖಲೆಗಳ ಡಿಜಿಟಲ್ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಿಡುಗಡೆ ಮಾಡಿದ್ದಾರೆ.
ಬಿಡುಗಡೆ ಮಾಡಿದ ದಾಖಲೆಯಲ್ಲೇನಿದೆ?
1962ರಲ್ಲಿ ನೇತಾಜಿ ಅವರ ಮರಣ ವಾರ್ತೆಯನ್ನು ಅವರ ಕುಟುಂಬದವರಿಗೆ ತಿಳಿಸಿದ್ದು ನೆಹರೂ.
ನೇತಾಜಿಯವರ ಮಗಳು ವಿವಾಹವಾಗುವವರೆಗೆ ಕಾಂಗ್ರೆಸ್ ಸರ್ಕಾರ ಆಕೆಗೆ ಪ್ರತೀ ವರ್ಷ ರು. 6000 ನೀಡುತ್ತಿತ್ತು. 1965ರಲ್ಲಿ ಆಕೆಗೆ ಮದುವೆಯಾಯಿತು. ಅನಂತರ ಈ ಹಣ ನೀಡುವುದನ್ನು ನಿಲ್ಲಿಸಲಾಯಿತು. ಈ ಹಣವನ್ನು ನೇತಾಜಿಯವರ ಪತ್ನಿಗೆ ನೀಡಲು ಸರ್ಕಾರ ತೀರ್ಮಾನಿಸಿದ್ದರು, ಹಣ ಸ್ವೀಕರಿಸಲು ನೇತಾಜಿ ಪತ್ನಿ ನಿರಾಕರಿಸಿದ್ದರು.