ಹರಿದ್ವಾರ, ಜ.18- ಇಲ್ಲಿ ನಡೆಯುತ್ತಿರುವ ಅರ್ಧಕುಂಭಮೇಳದ ಜಾತ್ರೆಯಲ್ಲಿ ಸೇರಿದ್ದ ಸಾವಿರಾರು ಜನ ಈ ವ್ಯಕ್ತಿಯತ್ತಲೇ ದೃಷ್ಟಿಬೀರುತ್ತಾರೆ.
ಆ ಮನುಷ್ಯ ನಡೆದಾಡುತ್ತಿದ್ದರೆ ಜನ ಜೂನಲ್ಲಿನ ಪ್ರಾಣಿ ನೋಡಿದಂತೆ ನೋಡುತ್ತಾರೆ. ಅಚ್ಚರಿಯಿಂದ ಅವರ ಮುಖಗಳು ಅರಳುತ್ತವೆ. ಯಾರೀ ವ್ಯಕ್ತಿ…….ಬಂಗಾರದ ಬಾಬಾ(ಗೋಲ್ಡ್‌ನ್ ಬಾಬಾ) ಎಂದು ಕರೆಯಲಾಗುವ ಈ ವ್ಯಕ್ತಿ ನಿಜಕ್ಕೂ ಬಂಗಾರದ ಮನುಷ್ಯನೇ ಸರಿ. ಈ ವ್ಯಕ್ತಿ ತನ್ನ ಅನುಯಾಯಿಗಳೊಂದಿಗೆ ಹೆಜ್ಜೆ ಹಾಕುತ್ತಿದ್ದರೆ ಘಲ್‌ಘಲ್ ಎಂಬ ಶಬ್ಧ ಗಮನ ಸೆಳೆಯುತ್ತದೆ.
ಕಾರಣ ಈ ಬಂಗಾರದ ಮನುಷ್ಯನ ಮೈ ಮೇಲೆರುವುದು ಒರೋಬ್ಬರಿ 3 ಕೋಟಿ ರೂ. ಮೌಲ್ಯದ ಚಿನ್ನದ ಒಡವೆಗಳು. ಇವನ ಕೈಯ್ಯಲ್ಲಿ ಕಂಗೊಳಿಸುವ ವಜ್ರಖಚಿತ ಕೈಗಡಿಯಾರಕ್ಕೆ 30 ಲಕ್ಷ ರೂ.ಗಳು. ನೀವೇಕೆ ಹೀಗೆ ಬಂಗಾರ ಹೇರಿಕೊಂಡು ಓಡಾಡುತ್ತೀರಿ ಎಂದು ಪ್ರಶ್ನಿಸಿದರೆ ಅವನಿಗಿಂತ ಮೊದಲೇ ಅವನ ಶಿಷ್ಯರು ಬಂಗಾರ ಬೆಲೆ ಬಾಳುವ ಲೋಹ ಅಲ್ಲದೆ, ಅವರ ವ್ಯಕ್ತಿತ್ವಕ್ಕೆ ಈ ಚಿನ್ನ ಒಪ್ಪುತ್ತದೆ ಎನ್ನುತ್ತಾರೆ.
ಈ ಬಂಗಾರ ಬಾಬಾನ ನಿಜ ನಾಮಧೇಯ ಸುಧೀರ್‌ಕುಮಾರ್ ಮಕ್ಕಡ್, ವಯಸ್ಸು 53, ಸನ್ಯಾಸ ಸ್ವೀಕರಿಸುವ ಮುನ್ನ ಮಕ್ಕಡ್ ಆಭರಣ ವ್ಯಾಪಾರಿಯಾಗಿದ್ದನಂತೆ.