ರಾಷ್ಟ್ರೀಯ

ದೆಹಲಿ: ಚಲಿಸುತ್ತಿದ್ದ ಕಾರಿನಲ್ಲಿ ಗೃಹಿಣಿ ಮೇಲೆ ಸಾಮೂಹಿಕ ಅತ್ಯಾಚಾರ

Pinterest LinkedIn Tumblr

gangrape

ನೋಯ್ಡಾ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ನಾಲ್ವರು ಕಾಮೂಕರು ಗೃಹಿಣಿಯೊಬ್ಬರಿಗೆ ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
42 ವರ್ಷದ ಗೃಹಿಣಿ ಜೈಲಿನಲ್ಲಿದ್ದ ತನ್ನ ಗಂಡನನ್ನು ಕಾಣಲು ಬಸ್ ಸ್ಟಾಂಡ್ ನಲ್ಲಿ ಕಾಯುತ್ತಿದ್ದ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ಬಂದ ನಾಲ್ವರು ಲುಕ್ಸರ್ ಜೈಲಿಗೆ ಡ್ರಾಪ್ ಮಾಡುವುದಾಗಿ ಹೇಳಿ ಕಾರನ್ನು ಹತ್ತಿಕೊಂಡಿದ್ದಾರೆ ನಂತರ ಆಕೆಗೆ ತಿಂಡಿ ಹಾಗೂ ಕುಡಿಯಲು ಪಾನೀಯ ನೀಡಿದ್ದಾರೆ. ಪಾನೀಯ ಸೇವನೆ ಬಳಿಕ ಪ್ರಜ್ಞಾಹೀನರಾದ ಮಹಿಳೆ ಮೇಲೆ ನಾಲ್ವರು ಕಾಮಿಗಳು ಅತ್ಯಾಚಾರವೆಸಗಿ, ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ಈ ಸಂಬಂಧ ಸಂತ್ರಸ್ತ ಮಹಿಳೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅತ್ಯಾಚಾರ ನಡೆಸಿದವರ ಪೈಕಿ ಇಬ್ಬರು ತನಗೆ ಪರಿಚಯವಿರುವುದಾಗಿ ಆಕೆ ತಿಳಿಸಿದ್ದಾಳೆ. ಸಂತ್ರಸ್ತ ಮಹಿಳೆ ಗಾಜಿಯಾಬಾದ್‌ ಮೂಲದವಳಾಗಿದ್ದು, ಇಬ್ಬರು ಆರೋಪಿಗಳು ಗ್ರೇಟರ್‌ ನೊಯ್ಡಾದವರಾಗಿದ್ದಾರೆ ಎನ್ನಲಾಗಿದೆ. ಸದ್ಯ ಸಂತ್ರಸ್ತ ಮಹಿಳೆಗೆ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

Write A Comment