ರಾಷ್ಟ್ರೀಯ

ಮಂಡಕ್ಕಿ ಬರ್ಫಿ ಮಾಡೋದು ಹೀಗೆ….

Pinterest LinkedIn Tumblr

mandakkiಮಂಡಕ್ಕಿಯಿಂದ ಹಲವಾರು ಡಿಶ್‌ ಮಾಡಬಹುದು ಎಂಬುದು ನಿಮಗೆ ಗೊತ್ತೇ ಇದೆ ಅಲ್ವಾ…? ಚುರುಮುರಿ, ಚಾಟ್‌, ಲಡ್ಡು ಹೀಗೆ ಹಲವಾರು ಸ್ವೀಟ್‌ ಆ್ಯಂಡ್‌ ಸ್ಪೈಸಿ ಡಿಶ್‌ ಮಾಡಬಹುದು. ಮಂಡಕ್ಕಿಯಿಂದ ಬರ್ಫಿ ಸಹ ಮಾಡಬಹುದು ಎಂಬ ವಿಷಯ ನಿಮಗೆ ಗೊತ್ತೆ..? ಯೆಸ್‌ ಅದು ಸಹ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು :

ಮಂಡಕ್ಕಿ 4ಕಪ್‌
ಬೆಲ್ಲದ ಪುಡಿ 1/2 ಕಪ್‌
ಎಳ್ಳು 1 ಚಮಚ
ಕಡ್ಲೆ ಬೀಜ 2 ಚಮಚ
ಕೊಬ್ಬರಿ 3 ಚಮಚ
ತುಪ್ಪ 3 ಚಮಚ
ನೀರು

ತಯಾರಿಸುವ ವಿಧಾನ :

ಮೊದಲಿಗೆ 1/2 ಕಪ್‌ ಬೆಲ್ಲ ತೆಗೆದುಕೊಂಡು ಸ್ವಲ್ಪ ನೀರಿನ ಜೊತೆ ಪ್ಯಾನ್‌ನಲ್ಲಿ ಹಾಕಿ ಪಾಕ ಬರಿಸಿ.
ಪಾಕ ಬಂದ ನಂತರ ಅದನ್ನು ತಣಿಯಲು ಬಿಡಿ.
ಒಂದು ತಟ್ಟೆಯಲ್ಲಿ ತುಪ್ಪ ಸವರಿ ಅದರ ಮೇಲೆ ಎಳ್ಳನ್ನು ಉದುರಿಸಿ.
ನಂತರ ಆ ಪಾತ್ರೆಯನ್ನು ಮತ್ತೆ ಹೀಟ್‌ ಮಾಡಿ.  ಎರಡು ಮೂರು ನಿಮಿಷ ಹಾಗೇ ಕುದಿಸುತ್ತಿರಿ.
ಈಗ ಅದಕ್ಕೆ ಉಳಿದ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಕ್ಸ್‌ ಮಾಡಿ.
ನಂತರ ತುಪದಪ ಸವರಿದ ತಟ್ಟೆಯ ಮೇಲೆ ಅದನ್ನು ಹಾಕಿ ಪೂರ್ತಿಯಾಗಿ ಹರಡುವಂತೆ ಮಾಡಿ. ಅದರ ಮೇಲೆ ಕೊಬ್ಬರಿ ಹಾಕಿ ಸ್ಪ್ರೆಡ್‌ ಮಾಡಿ.
ತಣ್ಣಗಾದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಅದನ್ನು ಕತ್ತರಿಸಿ ಸರ್ವ್‌ ಮಾಡಿ.

Write A Comment