ದರ್‌ಬಂಗಾ: ಪ್ರೀತಿಸಿ ಮದುವೆಯಾದ ಗಂಡ ಮೊದಲ ರಾತ್ರಿ ಮುಗಿದ ಬಳಿಕ ಪತ್ನಿಯನ್ನು ತನ್ನ ತಮ್ಮನ ಸುಪರ್ದಿಗೆ ಒಪ್ಪಿಸಿದ ನಾಚಿಕೆಗೇಡಿನ ಘಟನೆ ದರ್‌ಬಂಗಾದ ಮನಿಗಾಚಿಯಲ್ಲಿ ನಡೆದಿದೆ.
ಇಲ್ಲಿನ ಮದನ್ ಮೋಹನ್ ಎಂಬ ವ್ಯಕ್ತಿ ಯುವತಿಯೋರ್ವಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಮದುವೆಯ ಮೊದಲ ರಾತ್ರಿ ಮುಗಿದ ಬಳಿಕ ಆಕೆಯನ್ನು ತಮ್ಮನ ಸುಪರ್ದಿಗೆ ಒಪ್ಪಿಸಿ ಕ್ರೂರತೆ ಮೆರೆದಿದ್ದಾನೆ.
ಮದುವೆಯಾದ ಮೇಲೆ ಸರ್ಕಾರಿ ನೌಕರಿ ಸಿಕ್ಕ ಖುಷಿಯಲ್ಲಿದ್ದ ಮದನ್ ಮೋಹನ್, ಮತ್ತೊಂದು ಮದುವೆಯಾಗಿ ಈ ಹಿಂದೆ ಮದುವೆಯಾಗಿದ್ದ ಯುವತಿಯನ್ನು ತನ್ನ ಸಹೋದರನಿಗೆ ಒಪ್ಪಿಸಿ ಮತ್ತೊಂದು ಹೆಂಡ್ತಿ ಜೊತೆ ಸುಖವಾಗಿದ್ದಾನೆ.
ಇನ್ನು ಮದನ್ ಮೋಹನ್ ಸಹೋದರ ಈ ಮಹಿಳೆ ಮೇಲೆ ಅನೇಕ ಬಾರಿ ಲೈಂಗಿಕವಾಗಿ ಶೋಷಣೆ ಮಾಡಿದ್ದು, ಈ ಕುರಿತು ಗ್ರಾಮದ ಪಂಚಾಯ್ತಿಗೆ ಮಹಿಳೆ ದೂರು ನೀಡಿದಾಗ ಪಂಚಾಯ್ತಿ ಮದನ್ ಮೋಹನ್ ಪರ ತೀರ್ಪು ನೀಡಿದೆ.
ಸದ್ಯ ಪೊಲೀಸರ ಮೊರೆ ಹೋಗಿರುವ ಮಹಿಳೆ, ಮದನ್ ಮೋಹನ್ ತನಗೆ ಮೋಸ ಮಾಡಿದ್ದು, ಆತನ ಸಹೋದರನಿಂದ ಆದ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಒದಗಿಸಬೇಕೆಂದು ಕೋರಿದ್ದಾಳೆ.