ರಾಷ್ಟ್ರೀಯ

ಶ್ರೀಮಂತ ಅಂತಾ ಭಿಕ್ಷುಕನ ಜತೆ ಮದುವೆ: ಲೇಡಿ ಬ್ರೋಕರ್‌ ಅರೆಸ್ಟ್‌

Pinterest LinkedIn Tumblr

biksheಹೈದ್ರಾಬಾದ್: ಗಲ್ಫ್‌ ದೇಶಗಳ ಶ್ರೀಮಂತ ಪುರುಷರಿಗೆ ಮದುವೆ ಮಾಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಸಜೀದಾ ಬೇಗಂ ಎಂಬಾಕೆ ಬಂಧಿತ ಮದುವೆ ಬ್ರೋಕರ್.

ಅಲ್ಲಿನ ಶ್ರೀಮಂತರಿಗೆ ವಿವಾಹ ಮಾಡಿಸುತ್ತೇನೆ ಅಂತ ಹೇಳಿದ್ದ ಈ ಬೇಗಂ, ಭಿಕ್ಷುಕನಿಗೆ ಮದುವೆ ಮಾಡಿಸಿ ವಂಚಿಸುತ್ತಿದ್ದಾಳೆ ಎಂದು ಸಂತ್ರಸ್ತೆಯ ಪೋಷಕರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿದ್ದಾರೆ.

ಕಳೆದ ಅಗಸ್ಟ್‌‌ನಲ್ಲಿ ಒಮನ್‌ನ ಶ್ರೀಮಂತ ವ್ಯಕ್ತಿಯಂದು ಮದುವೆ ಮಾಡಿಸಿದ್ದಾಳೆ. ಆದರೆ, ಮದುವೆಯಾದ ಮಹಿಳೆ ಒಮನ್‌ಗೆ ತೆರಳಿದ ನಂತರ ಪತಿ ಭಿಕ್ಷುಕ ಎಂದು ಗೊತ್ತಾಗಿದೆ ಎಂದು ಹೈದ್ರಾಬಾದ್‌ನ ಸಂತ್ರಸ್ತೆ ಮಹಿಳೆಯ ಪೋಷಕರು ದೂರಿದ್ದಾರೆ.

ಸಂತ್ರಸ್ತೆ ಮಹಿಳೆಯ ಪೋಷಕರು ದೂರಿನ ಆಧಾರದ ಮೇಲೆ ಬ್ರೋಕರ್‌ ಬೇಗಂ ವಿರುದ್ಧ ಚೀಟಿಂಗ್ ಕೇಸ್‌ ದಾಖಲಿಸಿದ್ದು, ಒಮನ್‌ನಲ್ಲಿ ಸಿಲುಕಿರುವ ಮಹಿಳೆಯನ್ನು ತವರಿಗೆ ವಾಪಸ್ ಕರೆತರಲು ಪೊಲೀಸರು ಯತ್ನಿಸುತ್ತಿದ್ದಾರೆ.

Write A Comment