ರಾಷ್ಟ್ರೀಯ

ಪುರುಷರ ಬಗ್ಗೆ ನೀವು ಅರಿತುಕೊಳ್ಳಬೇಕಾದ ಸೀಕ್ರೆಟ್‌ಗಳೇನು…?

Pinterest LinkedIn Tumblr

1seಹುಡುಗಿಯ ಮನಸ್ಸನ್ನು ಅರಿಯೋದು ಹಾಗೂ ಸೂರ್ಯ ವಿರುದ್ಧ ದಿಕ್ಕಿನಲ್ಲಿ ಹುಟ್ಟುವಂತೆ ಮಾಡೋದು ಸಾಧ್ಯಾನೇ ಇಲ್ಲದ ಮಾತು ಎಂದು ಹಿಂದಿನಿಂದಲೂ ಜನ ಅಂದುಕೊಂಡು ಬಂದಿದ್ದಾರೆ. ಆದರೆ ಪುರುಷರಲ್ಲೂ ಅಂತಹ ಕೆಲವು ಸಂಗತಿಗಳಿವೆ ಅವುಗಳ ಬಗ್ಗೆ ನಿಮಗೆ ತಿಳಿಯಲು ಬಹಳ ಕಷ್ಟವಾಗುತ್ತದೆ. ಅದನ್ನು ತಿಳಿದುಕೊಳ್ಳೋದು ಹೇಗೆ ಎಂಬುದು ಸಹ ನಿಮಗೆ ಗೊತ್ತಾಗದೇ ಇರಬಹುದು.

ನಿಮ್ಮ ಸಂಗಾತಿಯ ಕೆಲವು ವಿಷಯಗಳು ನಿಮಗೆ ತಿಳಿಯದೇ ಇದ್ದಿರಬಹುದು. ಅದನ್ನು ನೀವು ತಿಳಿದುಕೊಳ್ಳಲೇಬೇಕು. ಪುರುಷರ ಈ ಕೆಲವು ಸೀಕ್ರೆಟ್‌ಗಳನ್ನು ಮಹಿಳೆಯರು ಅರಿತುಕೊಳ್ಳಲೇಬೇಕು…

ಮೊದಲಿಗೆ ನಿಮ್ಮ ಮೇಕಪ್‌ ಖರ್ಚಿನ ಬಗ್ಗೆ ಆತ ಬೆಚ್ಚಿ ಬೀಳುತ್ತಾನೆ ಗೊತ್ತಾ. ಅದನ್ನು ನೀವು ಅರಿತಿದ್ದರೆ ಉತ್ತಮ.
ನಿಮಗೆ ಆತ ಥ್ಯಾಂಕ್ಸ್‌, ಕಂಗ್ರಾಟ್ಸ್‌, ನೈಸ್‌ ಎಂದು ಹೇಳಿದಾಗ ಹೇಗೆ ಖುಶಿಯಾಗುತ್ತದೋ ಅದೇ ರೀತಿ ಆತ ಕೂಡ ನಿಮ್ಮಿಂದ ಅದನ್ನು ಬಯಸುತ್ತಾನೆ.
ಫ್ರೀ ಟೈಮ್‌ನಲ್ಲಿ ಆತ ಒಬ್ಬಂಟಿಯಾಗಿ ಇರಲು ಬಯಸುತ್ತಾನೆ.
ಮೊದಲ ಬಾರಿ ಸೆಕ್ಸ್‌ ಮಾಡುವಾಗ ಅಥವಾ ಇಬ್ಬರು ಒಂದಾಗುವ ಸಮಯದಲ್ಲಿ ಆತ ನಿಮ್ಮಂತೆ ಸ್ವಲ್ಪ ಮಟ್ಟಿಗೆ ನರ್ವಸ್‌ ಆಗಿರುತ್ತಾನೆ.
ನೀವು ಜೊತೆಗಿದ್ದಾಗಲೂ ಸಹ ಇನ್ಯಾರೋ ಆಕರ್ಷಕ ಹುಡುಗಿ ಮುಂದೆ ಹೋದಾಗ ಆಕೆಯ ಕಡೆ ನೋಡುತ್ತಾನೆ, ಫ್ರೆಂಡ್ಸ್‌ ಜೊತೆ ಇರುವಾಗ ಇದು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ.
ನಿಮಗೆ ತಿಳಿಯದಂತೆ ಆತ ಈಗಲೂ ಸಹ ವಯಸ್ಕರ ಚಿತ್ರಗಳನ್ನು ಕದ್ದು ಮುಚ್ಚಿ ನೋಡಬಹುದು.
ಆತ ನಿಮಗಾಗಿ ಏನು ಬೇಕಾದರು ಮಾಡಲು, ಯಾವ ಮಟ್ಟಿಗೆ ಹೋಗಲೂ ಸಹ ರೆಡಿ ಇದ್ದಾನೆ ಎಂದರೆ ಆತನಿಗೆ ನಿಮ್ಮನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದರ್ಥ.
ಪುರುಷರು ಹೆಚ್ಚಾಗಿ ಹಣಕ್ಕೆ ಆದ್ಯತೆ ನೀಡುತ್ತಾರೆ, ಯಾಕೆಂದರೆ ಮಹಿಳೆಯರಿಗಿಂತ ಹೆಚ್ಚಿನ ಜವಾಬ್ದಾರಿ ಪುರುಷರ ಕೈಯಲ್ಲಿರುತ್ತದೆ.

Write A Comment