ರಾಷ್ಟ್ರೀಯ

ಮುಂದಿನ ವರ್ಷ ರಾಮ ನಿರ್ಮಾಣ ಕಾರ್ಯ ಆರಂಭ: ಸಾದ್ವಿ ಪ್ರಾಚಿ

Pinterest LinkedIn Tumblr

images (2)

ಮೀರತ್: ಮುಂದಿನ ವರ್ಷ ಅಯೋಧ್ಯೆಯಲ್ಲಿ ರಾಮ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ ಎಂದು ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.
2017 ನೇ ವರ್ಷದಲ್ಲಿ  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದ್ದು. ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ. ರಾಮಮಂದಿರ ನಿರ್ಮಾಣಕ್ಕೆ ಕಲ್ಲುಗಳನ್ನು ಸಿದ್ದಪಡಿಸಲಾಗುತ್ತದೆ.
ಸಂತ ಸಮಾಜ ಯಾರೊಬ್ಬರ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಮೀರತ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.
ಇನ್ನು ಸಮಾಜವಾದಿ ಪಕ್ಷದ ಶಾಸಕ ಬುಕ್ಕಲ್ ನವಾಬ್ ರಾಮ ಮಂದಿರ ನಿರ್ಮಾಣಕ್ಕಾಗಿ 10 ಲಕ್ಷ ದೇಣಿಗೆ ಹಾಗೂ ಚಿನ್ನದ ಕಿರೀಟ ನೀಡಿದ್ದಾರೆ ಎಂದು ಸಾದ್ವಿ ಪ್ರಾಚಿ ತಿಳಿಸಿದರು.

 

Write A Comment