ರಾಷ್ಟ್ರೀಯ

ಓವೈಸಿಗೆ ಬಾಯಿ ಮುಚ್ಚಿಕೊಂಡಿರು ಎಂದ ಇಸಿಸ್

Pinterest LinkedIn Tumblr

Owaisiಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿಗೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆ ಗುರುವಾರ ಬೆದರಿಕೆ ಹಾಕಿದೆ.

ಬೆದರಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಸಾಸುದ್ದೀನ್ ಓವೈಸಿ ಅವರು, ಟ್ವಿಟರ್ ನಲ್ಲಿ ಇಸಿಸ್ ಸಂಘನೆಗೆ ಸೇರಿದ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಸತ್ಯ ಗೊತ್ತಿಲ್ಲದೆ ಇಸಿಸ್ ಬಗ್ಗೆ ಮಾತನಾಡುವ ಬದಲು ಬಾಯಿ ಮುಚ್ಚಿಕೊಂಡಿರುವುದು ನಿನಗೇ ಒಳ್ಳೆಯದು ಎಂದು ಹೇಳಿದ್ದಾನೆಂದು ಹೇಳಿಕೊಂಡಿದ್ದಾರೆ.

ಇದಲ್ಲದೆ, ಭಾರತದ ಮೇಲೂ ಶೀಘ್ರದಲ್ಲೇ ಆಕ್ರಮಣ ಮಾಡಲಾಗುವುದು ಎಂದಿರುವ ಆತ, ಭಾರತೀಯ ಮುಸ್ಲಿಂ ಎಂದು ಹೇಳಿಕೊಳ್ಳಲು ನಿನಗೆ ನಾಚಿಕೆಯಾಗಬೇಕು. ಇಸ್ಲಾಮಿಕ್ ಸ್ಟೇಟ್ ವಿರುದ್ದ ಮಾತನಾಡುವ ನೀನು ನರಕಕ್ಕೆ ಹೋಗುತ್ತೀಯ ಎಂದು ಹೇಳಿದ್ದಾನೆಂದು ಹೇಳಿದ್ದಾರೆ. ಓವೈಸಿಗೆ ಬೆದರಿಕೆ ಹಾಕಿರುವ ಟ್ವಿಟರ್ ಖಾತೆಯು ಇಸಿಸ್ ನಿರ್ವಹಿಸುತ್ತಿರುವ ಖಾತೆ ಎಂದೇ ಹೇಳಲಾಗುತ್ತಿದ್ದು, ಬೆದರಿಕೆ ಹಾಕಿದ ವ್ಯಕ್ತಿಯ ಟ್ವೀಟ್ ಗೆ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ. ನೀನೊಬ್ಬ ತಕ್ಫಿರಿ (ಒಬ್ಬ ಮುಸ್ಲಿಂ ಮತ್ತೊಬ್ಬ ಮುಸ್ಲಿಮನಿಗೆ ನೋವು ಮಾಡುವುದು), ದುಷ್ಟ ಇಸಿಸ್ ಬಗ್ಗೆ ಚರ್ಚೆ ಮಾಡಬೇಕೆಂದಿದ್ದರೆ ಆ ಚರ್ಚೆಗೆ ನಾನು ಸಿದ್ಧನಿದ್ದೇನೆ.

ನಾನು ಕೇಳುವ ತರ್ಕಬದ್ಧ ಪ್ರಶ್ನೆಗೆ ನೀನಗೆ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಓವೈಸಿ ಅವರು ಇಸಿಸ್ ವಿರುದ್ಧ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಓವೈಸಿಯವರಿಗೆ ಇಸಿಸ್ ಈ ರೀತಿಯಾಗಿ ಬೆದರಿಕೆ ಹಾಕಿದೆ ಎಂದು ಹೇಳಲಾಗುತ್ತಿದೆ.

Write A Comment