ರಾಷ್ಟ್ರೀಯ

ಹಠಾತ್ ಹಿಮಕುಸಿತ, ಲಡಾಖ್​ನಲ್ಲಿ ನಾಲ್ಕು ಯೋಧರ ಸಾವು

Pinterest LinkedIn Tumblr

04-avaamche-webಜಮ್ಮು: ಲಡಾಖ್ ಪ್ರದೇಶದಲ್ಲಿ ಸಂಭವಿಸಿದ ಹಠಾತ್ ಹಿಮಕುಸಿತದಲ್ಲಿ ಸಿಲುಕಿ ಸೇರಿದ ನಾಲ್ಕು ಮಂದಿ ಸೇನಾ ಯೋಧರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ವಕ್ತಾರರು ಸೋಮವಾರ ಇಲ್ಲಿ ತಿಳಿಸಿದ್ದಾರೆ.

ಭಾನುವಾರ ಸಂಜೆ 4.30ರ ವೇಳೆಗೆ ಲಡಾಖ್​ನ ದಕ್ಷಿನ ಗ್ಲೇಸಿಯರ್​ನಲ್ಲಿ ಪಹರೆ ಕಾರ್ಯದಲ್ಲಿದ್ದಾಗ ಸಂಭವಿಸಿದ ಹಠಾತ್ ಹಿಮಕುಸಿತಕ್ಕ್ಕೆ ಈ ಯೋಧರು ಬಲಿಯಾದರು ಎಂದು ಉಧಂಪುರದ ರಕ್ಷಣಾ ವಕ್ತಾರ ಕರ್ನಲ್ ಎಸ್.ಡಿ. ಗೋಸ್ವಾಮಿ ನುಡಿದರು.

ಹಿಮಪ್ರವಾಹ ಸಂಭವಿಸಿದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು. ಆದರೆ ನಾಲ್ವರು ಯೋಧರ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ. ನಾಲ್ಕೂ ಮಂದಿಯ ಪಾರ್ಥಿವ ಶರೀರಗಳನ್ನು ಹಿಮಕುಸಿತ ಸಂಭವಿಸಿದ ಸ್ಥಳದಲ್ಲಿ ಪತ್ತೆ ಹಚ್ಚಲಾಗಿದ್ದು ಹಂದರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

Write A Comment