ರಾಷ್ಟ್ರೀಯ

ಭಾರತದಲ್ಲಿ ಇಸಿಸ್ ಹರಡದಿರಲು ಭಾರತೀಯ ಮುಸ್ಲಿಂರು ಕಾರಣ: ರಾಜನಾಥ್ ಸಿಂಗ್

Pinterest LinkedIn Tumblr

rajnath

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಹಾಗೂ ಅಲ್ ಖೈದಾದಂತಹ ಭಯೋತ್ಪಾದನೆ ಸಂಘಟನೆಗಳೆಡೆಗೆ ಭಾರತೀಯ ಮುಸ್ಲಿಂರು ಆಕರ್ಷಿತರಾಗದಿರುವುದೇ ಭಾರತದಲ್ಲಿ ಇಸಿಸ್ ಉಗ್ರ ಸಂಘಟನೆ ಹರಡದಿರಲು ಕಾರಣ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಇಸ್ಲಾಂ ನಂಬುವ ಕುಟುಂಬಗಳು ಇಸಿಸ್ ಉಗ್ರ ಸಂಘಟನೆಗಳನ್ನು ನಂಬುವುದಿಲ್ಲ ಹೀಗಾಗಿ ಭಾರತದಲ್ಲಿ ಇಸಿಸ್ ಉಗ್ರ ಸಂಘಟನೆ ಬೇರು ಬಿಡಲು ಸಾಧ್ಯವಾಗಿಲ್ಲ ಎಂದರು.

ಭಾರತೀಯ ಮುಸ್ಲಿಂರು ಸಹ ಕುಟುಂಬ ಯೋಜನೆ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ನೆಲೆಸಿರುವಂತಹ ಪ್ರಗತಿಪರ ಮುಸ್ಲಿಂ ಬಾಂಧವರು ವಿಶ್ವದ ಯಾವುದೇ ದೇಶಗಳಲ್ಲಿ ಇಲ್ಲ ಎಂಬುದೇ ಹೆಮ್ಮೆಯ ವಿಚಾರ ಎಂದು ರಾಜನಾಥ್‌ ಸಿಂಗ್‌ ತಿಳಿಸಿದರು.

Write A Comment