ಮನೋರಂಜನೆ

ಕ್ರಿಕೆಟಿಗರ ಆಯ್ಕೆ ಸಂದರ್ಭ ಡಿಡಿಸಿಎ ಅಧಿಕಾರಿಯಿಂದ ಸೆಕ್ಸ್ ಗಾಗಿ ಬೇಡಿಕೆ: ಕೇಜ್ರಿವಾಲ್

Pinterest LinkedIn Tumblr

kejriwal

ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಅಧಿಕಾರಿಗಳು ಆಯ್ಕೆ ಪ್ರಕ್ರಿಯೆ ವೇಳೆ ಅಭ್ಯರ್ಥಿಗಳ ಬಳಿ ಸೆಕ್ಸ್ ಗೆ ಬರುವಂತೆ ಕೇಳುತ್ತಿದ್ದರೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಆರೋಪ ಮಾಡಿದ್ದಾರೆ.

ಡಿಡಿಸಿಎ ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ಅವರು, ಆಯ್ಕೆ ಮಾಡಿದ್ದಕ್ಕೆ ಪ್ರತಿಯಾಗಿ ಸೆಕ್ಸ್ ಗೆ ಬರುವಂತೆ ಡಿಡಿಸಿಎ ಅಧಿಕಾರಿಗಳು ಅಭ್ಯರ್ಥಿಗಳ ಬಳಿ ಕೇಳುತ್ತಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಹಿರಿಯ ಪತ್ರಕರ್ತರೊಬ್ಬರು ನನ್ನ ಬಳಿ ಮಾತನಾಡಿದ್ದರು. ನನ್ನ ಪತ್ನಿ ಆಯ್ಕೆ ಪ್ರಕ್ರಿಯೆಗೆಂದು ಹೋದಾಗ ಅಲ್ಲಿನ ಅಧಿಕಾರಿಗಳು ಸೆಕ್ಸ್ ಗೆ ಬರುವಂತೆ ಕೇಳಿದ್ದರು ಎಂದು ಹೇಳಿದ್ದರು. ಡಿಡಿಸಿಎಯಲ್ಲಿ ಅವ್ಯವಹಾರವಲ್ಲದೆಯೇ ಇನ್ನಿತರೆ ದಂಧೆಗಳು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ಮಾತನಾಡಿದ ಆ ಪತ್ರಕರ್ತರ ಹೆಸರನ್ನು ಕೇಜ್ರಿವಾಲ್ ಹೇಳಿಲ್ಲ.

ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ರಕ್ಷಣೆ ಮಾಡುವುದನ್ನು ಬಿಟ್ಟು ಡಿಡಿಸಿಎ ಪ್ರಕರಣದ ತನಿಖೆ ಆದೇಶಿಸಬೇಕು. ಡಿಡಿಸಿಎ ಹಗರಣದಲ್ಲಿ ನಮ್ಮ ಸರ್ಕಾರ ಯಾವುದೇ ತಪ್ಪನ್ನು ಮಾಡಿಲ್ಲ. ನನ್ನ ವಿರುದ್ದವೇ ತನಿಖೆ ನಡೆಸಿದರೂ ನಾನು ತನಿಖೆಗೆ ಸಿದ್ಧನಿದ್ದೇನೆ.

ಮಧ್ಯಪ್ರದೇಶ ವ್ಯಾಪಂ ಹಗರಣ ಕುರಿತಂತೆ ಕಣ್ಣುಮುಚ್ಚಿಕೊಂಡಿರುವ ಕೇಂದ್ರ ಸರ್ಕಾರ ನನ್ನ ಕಚೇರಿ ಮೇಲೆ ಸಿಬಿಐ ದಾಳಿ ನಡೆಸುತ್ತಿದೆ. ಡಿಡಿಸಿಎ ಅವ್ಯವಹಾರ ಕುರಿತಂತೆ ಯಾರೇ ಮಾತನಾಡಿದರೂ ಜೇಟ್ಲಿ ಅವರು ನನ್ನ ವಿರುದ್ದ ಪಿತೂರಿ ನಡೆದಿದೆ. ಗೌರವ ಹಾಳು ಮಾಡಲು ಯತ್ನ ನಡೆಯುತ್ತಿದೆ ಎಂದೇ ಹೇಳುತ್ತಾರೆ.

ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವನ್ನು ಭೇಟಿ ಯಾದಾಗ ನಾವು ನಿಮಗೆ ಮಗು ಇದ್ದಂತೆ. ನಮಗೆ ನೀವು ಮಾರ್ಗದರ್ಶನ ನೀಡಬೇಕು. ಯಾವುದೇ ತೊಡಕಿಲ್ಲದಂತೆ ಕೆಲಸ ಮಾಡೋಣ ಎಂದು ಹೇಳಿದಾಗ ಮೋದಿಯವರು ಏನನ್ನೂ ಮಾತನಾಡದೇ ಮೌನವಾಗಿದ್ದರು ಎಂದು ಹೇಳಿದ್ದಾರೆ.

Write A Comment