ನವದೆಹಲಿ: `ನಾವ್ಯಾಕೆ ಐರೋಪ್ಯ ಒಕ್ಕೂಟದ ನಾಯಕರಂತೆ ಇರಬಾರದು?’ಇಂತಹುದೊಂದು ಪ್ರಶ್ನೆಯನ್ನು ಕೇಳಿದ್ದು ಪ್ರಧಾನಿ ಮೋದಿ.
ಅದೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ. ಇತ್ತೀಚೆಗೆ ಪಾಕ್‍ಗೆ ದಿಢೀರ್ ಭೇಟಿ ನೀಡಿದ್ದ ವೇಳೆ ಮೋದಿ ಅವರು ಷರೀಫ್ ಗೆ ಈ ಪ್ರಶ್ನೆ ಕೇಳಿದ್ದರಂತೆ.
“ಐರೋಪ್ಯ ನಾಯಕರು ಆಗಾಗ್ಗೆ ಭೇಟಿಯಾಗುತ್ತಾ, ಹರಟೆ ಹೊಡೆಯುತ್ತಿರುತ್ತಾರೆ. ನಾವ್ಯಾಕೆ ಅವರಂತೆ ಆಗಬಾರದು” ಎಂಬ ಮೋದಿ ಅವರ ಪ್ರಶ್ನೆಗೆ ಹೌದೆಂಬಂತೆ ತಲೆಯಾಡಿಸಿದ ಷರೀಫ್ , “ಇಂತಹ ಮಾತುಕತೆಗಳಿಗೆ ಪ್ರತಿಕೂಲ ಘಟನೆಗಳು ಅಡ್ಡಿಯಾಗಬಾರದು” ಎಂದರಂತೆ.
ಮಾತುಕತೆಗೆ ಸಾಕ್ಷಿಯಾಗಿದ್ದ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ಇದನ್ನು ವರದಿ ಮಾಡಿದೆ.