ರಾಷ್ಟ್ರೀಯ

ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಲಾಲೂ ಪ್ರಸಾದ್ ಪತ್ನಿ, ಪುತ್ರಿ

Pinterest LinkedIn Tumblr

Lalu_2419201f

ಪಾಟ್ನಾ: ಬಿಹಾರ ವಿಧಾನ ಸಭೆಯನ್ನ ತನ್ನ ಇಬ್ಬರು ಪುತ್ರರನ್ನು ಗೆಲ್ಲಿಸಿ ವಿಜಯೋತ್ಸಾಹದಲ್ಲಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕುಟುಂಬ ರಾಜಕೀಯ ಮುಂದುವರಿಸಿದ್ದಾರೆ.

ಮುಂದಿನ ವರ್ಷ ನಡೆಯುವ ರಾಜ್ಯಸಭೆ ಚುನಾವಣೆಗೆ ಪತ್ನಿ ರಾಬ್ಡಿದೇವಿ ಮತ್ತು ಹಿರಿಯ ಪುತ್ರಿ ಮಿಸಾ ಭಾರ್ತಿ ಅವರನ್ನು ಕಣಕ್ಕಿಳಿಸಲಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಬಿಹಾರದಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಆರ್ ಜೆಡಿಯಿಂದ 80 ಶಾಸಕರು ಆಯ್ಕೆಯಾಗಿದ್ದಾರೆ. ರಾಜ್ಯಸಭೆಗೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡಲು 41 ಶಾಸಕರು ಮತ ಚಲಾಯಿಸಬೇಕಿದೆ. ಇಬ್ಬರನ್ನು ಆಯ್ಕೆ ಮಾಡಲು 82 ಶಾಸಕರು ಮತ ಚಲಾಯಿಸಬೇಕಾಗಿದೆ.

Write A Comment