ರಾಷ್ಟ್ರೀಯ

ತ್ರಿಪುರದ ಹಿರಿಯ ಸಿಪಿಐ-ಎಂ ನಾಯಕ ಚೌಧರಿ ಆತ್ಮಹತ್ಯೆ

Pinterest LinkedIn Tumblr

1-Tripura-WEBಅಗರ್ತಲಾ: ತ್ರಿಪುರದ ಹಿರಿಯ ಸಿಪಿಐ-ಎಂ ನಾಯಕ ಸುನಿಲ್ ಕುಮಾರ್ ಚೌಧರಿ ತಮ್ಮ ನಿವಾಸದ ಬಳಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

86 ವರ್ಷದ ಚೌಧರಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದು, ಸೋಮವಾರ ದಕ್ಷಿಣ ತ್ರಿಪುರ ಜಿಲ್ಲೆಯ ಸಬ್​ರೂಮ್ಲ್ಲಿರುವ ಅವರ ಮನೆಯಲ್ಲಿ ಚೌಧರಿ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಸಲಾಯಿತು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚೌಧರಿ ಅವರು ಯಾತನೆಯಿಂದ ಪಾರಾಗಲು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿಟ್ಟಿದ್ದಾರೆ.

1953ರಲ್ಲಿ ಅಖಂಡ ಸಿಪಿಐ ಪಕ್ಷದ ಸದಸ್ಯರಾಗಿ ಚೌಧರಿ ಸೇರ್ಪಡೆಯಾಗಿದ್ದರು, ನಂತರ 1964ರಲ್ಲಿ ಸಿಪಿಐ-ಎಂ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 5 ಸಲ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಮೃತರು ಪತ್ನಿ, ಒಬ್ಬ ಮಗ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Write A Comment