ರಾಷ್ಟ್ರೀಯ

ರಾಹುಲ್, ನಿಮ್ಮ ಜೀವನದಲ್ಲಿ ಅಚ್ಛೇ ದಿನ್ ಬರಲು ಬೇಗ ಮದುವೆಯಾಗಿ

Pinterest LinkedIn Tumblr

rahul_smilingfffಅಮೇಥಿ: ನರೇಂದ್ರ ಮೋದಿಯಿಂದಾಗಿ ಅಚ್ಛೇ ದಿನ್ ಬಂದಿಲ್ಲ, ಬುರೇ ದಿನ್ ಮಾತ್ರ ಬಂದಿರುವುದು ಎಂದು ಜನರಿಗೆ ಹೇಳುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಅಮೇಥಿ ನಿವಾಸಿಗಳು ಹೊಸತೊಂದು ಸಲಹೆ ನೀಡಿದ್ದಾರೆ.

ನಿಮ್ಮ ಜೀವನದಲ್ಲಿ ಅಚ್ಛೇದಿನ್ ಬರಬೇಕಾದರೆ ನೀವು ಮದುವೆಯಾಗಿ ಎಂದು ಅಮೇಥಿಯ ಮುಸಾಫಿರ್‌ಖಾನಾದ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಮಹಮ್ಮದ್ ಅನ್ವರ್ ರಾಹುಲ್‌ಗೆ ಸಲಹೆ ನೀಡಿದ್ದಾರೆ.

ಪ್ರತೀ ಯಶಸ್ವೀ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ. ಆದ್ದರಿಂದ ನೀವು ಮದುವೆಯಾದರೆ ಎಲ್ಲ ಸರಿಹೋಗುತ್ತದೆ. ಮದುವೆಯಾಗಿ ರಾಹುಲ್ ಅಣ್ಣಾ ಎಂದು ಅನ್ವರ್ ಸಲಹೆ ನೀಡಿದ್ದಾರೆ.

ಸಲಹೆ ಕೇಳಿ ಅಲ್ಲಿ ಸೇರಿದ್ದವರು ಜೋರಾಗಿ ಕರತಾಡನ ಮಾಡಿದ್ದಾರೆ. ಈ ಸಲಹೆಗೆ ರಾಹುಲ್‌ನದ್ದು ಬರೀ ನಗುವಷ್ಟೇ ಉತ್ತರವಾಗಿತ್ತು.

Write A Comment