ರಾಷ್ಟ್ರೀಯ

ಮುಫ್ತಿ ಮೊಹಮ್ಮದ್‌ ಸಯೀದ್‌ ಅಸ್ವಸ್ಥ; ದಿಲ್ಲಿ ಏಮ್ಸ್‌ಗೆ ದಾಖಲು

Pinterest LinkedIn Tumblr

Mufti-Mohammed-Sayeed-700

ಹೊಸದಿಲ್ಲಿ: 79ರ ಹರೆಯದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರಿಂದು ಶ್ರೀನಗರದಲ್ಲಿನ ತಮ್ಮ ನಿವಾಸದಲ್ಲಿ ತಮ್ಮ ದೇಹಾರೋಗ್ಯದಲ್ಲಿ ಏರುಪೇರಾಗುತ್ತಿರುವುದನ್ನು ದೂರಿಕೊಂಡ ಬಳಿಕ ಅವರನ್ನು ಒಡನೆಯೇ ಸರಕಾರಿ ವಿಮಾನದಲ್ಲಿ ದಿಲ್ಲಿಗೆ ಕರೆತರಲಾಯಿತು.

ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ ಸಯೀದ್‌ ಅವರನ್ನು ಏಮ್ಸ್‌ ಖಾಸಗಿ ವಾರ್ಡ್‌ಗೆ ದಾಖಲಿಸಲಾಯಿತು. ಈಗ ಅವರ ದೇಹಾರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್‌ ವಕ್ತಾರ ತಿಳಿಸಿದ್ದಾರೆ.

ಏಮ್ಸ್‌ ಖಾಸಗಿ ವಾರ್ಡ್‌ಗೆ ಸೇರಿಸಲ್ಪಟ್ಟ ಸಯೀದ್‌ ಅವರು ಮುಖ್ಯವಾಗಿ ಜ್ವರದಿಂದ ಬಳಲುತ್ತಿದ್ದರು. ಈಗ ಸಣ್ಣ ಪ್ರಮಾಣದ ಜ್ವರ ಅವರಲ್ಲಿದೆಯಾದರೂ ಅವರ ಒಟ್ಟಾರೆ ದೇಹಾರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದರು.

“ಮುಖ್ಯ ಮಂತ್ರಿ ಸಯೀದ್‌ ಅವರು ಇಂದು ಹೇಗಿದ್ದರೂ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಏಮ್ಸ್‌ಗೆ ಬರುವುದಿತ್ತು. ಡಾ| ಮೊಹಮ್ಮದ್‌ ಅಶ್ರಫ್ ಗನೀ ಅವರ ನೇತೃತ್ವದ ವೈದ್ಯರ ತಂಡವು ಸಯೀದ್‌ ಅವರನ್ನು ತಪಾಸಣೆ ಮಾಡುವುದಿತ್ತು ಎಂದು ಈ ನಡುವೆ ಇನ್ನೊಬ್ಬ ವೈದ್ಯರು ಹೇಳಿದ್ದಾರೆ.
-ಉದಯವಾಣಿ

Write A Comment