ರಾಷ್ಟ್ರೀಯ

ಸಂಸದರ ಬಳಕೆಗಾಗಿ ವಿದ್ಯುತ್ ಚಾಲಿತ ಬಸ್ ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

Pinterest LinkedIn Tumblr

modi-2ನವದೆಹಲಿ: ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸದರ ಬಳಕೆಗಾಗಿ ನಿಯೋಜಿಸಲಾಗಿರುವ ವಿದ್ಯುತ್ ಚಾಲಿತ ಬಸ್ ಗೆ ಚಾಲನೆ ನೀಡಿದ್ದಾರೆ.

ಗೋ- ಗ್ರೀನ್ ಬಸ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ, ಪರಿಸರ ಸಂರಕ್ಷಣೆ ಬಗ್ಗೆ ವಿಶ್ವಾದ್ಯಂತ ಕಾಳಜಿ ವಹಿಸಲಾಗುತ್ತಿದೆ. ಪರಿಸರ ಮಾಲಿನ್ಯದಿಂದ ಉಂಟಾಗುವ ಅಪಾಯಗಳು ದೀರ್ಘಕಾಲದ ನಂತರ ತಿಳಿಯಲಿದೆ ಎಂದಿದ್ದಾರೆ.

ವಿದ್ಯುತ್ ಚಾಲಿತ ಬಸ್ ಬಳಕೆಯಿಂದಾಗಿ ವಾರ್ಷಿಕ 8 ಲಕ್ಷ ರೂಪಾಯಿ ಉಳಿತಾಯವಾಗಲಿದ್ದು ಸಂಸದರ ಬಳಕೆಗಾಗಿ ಬಿಡುಗಡೆ ಮಾಡಲಾಗಿರುವ ಗೋ-ಗ್ರೀನ್ ಬಸ್ ಗಳನ್ನು ಸಾರ್ವಜನಿಕ ಸಾರಿಗೆಗೂ ವಿಸ್ತರಿಸಲಾಗುವುದು ಎಂದು  ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಸ್ತೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

Write A Comment