ರಾಷ್ಟ್ರೀಯ

ಹಳಿ ತಪ್ಪಿದ ಗೂಡ್ಸ್ ರೈಲಿನ 25 ಬೋಗಿಗಳು

Pinterest LinkedIn Tumblr

goodsಭಡೋಹಿ (ಉತ್ತರಪ್ರದೇಶ) , ಡಿ.21-ಲಕ್ನೋ-ಅಲಹಬಾದ್ ಮಾರ್ಗದ ಸರಕು ಸಾಗಣೆ (ಗೂಡ್ಸ್) ರೈಲಿನ 25 ಬೋಗಿಗಳು ಭಡೋಹಿ ಮತ್ತು ಮೋಧ್ ರೈಲ್ವೆ ನಿಲ್ದಾಣಗಳ ನಡುವೆ ಹಳಿ ತಪ್ಪಿದ್ದು, ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ರೈಲಿನಲ್ಲಿದ್ದ ಸಿಬ್ಬಂದಿಗೆ ಯಾವುದೇ ಪ್ರಾಣಹಾನಿ, ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಇಂದು ಮಧ್ಯಾಹ್ನ ಗೂಡ್ಸ್ ರೈಲು ವೇಗವಾಗಿ ಬರುತ್ತಿದ್ದಾಗ ರೈಲು ಹಳಿಯಲ್ಲಿ ವ್ಯತ್ಯೆಯ ಉಂಟಾಗಿ ಈ ಅವಗಢ ಸಂಭವಿಸಿದೆ ಎಂದು ಸ್ಟೇಷನ್ ಮಾಸ್ಟರ್ ಅಹಮದ್ ಅಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಲಕ್ನೋ-ಅಲಹಬಾದ್ ನಡುವೆ ಸಂಚರಿಸುವ ಸುಮಾರು 12ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಳಿ ತಪ್ಪಿರುವ ವ್ಯಾಗನ್‌ಗಳನ್ನು ತೆಗೆಯುವ ಕೆಲಸ ನಡೆದಿದೆ ಎಂದು ಅವರು ಹೇಳಿದ್ದಾರೆ.

Write A Comment