ರಾಷ್ಟ್ರೀಯ

ಹೆಂಡತಿಯೊಂದಿಗೆ ಜತೆ ಮುನಿಸಿಕೊಂಡು ವಿಮಾನದಿಂದ ಇಳಿದೋದ ಪತಿ

Pinterest LinkedIn Tumblr

indigo

ಪಾಟ್ನಾ: ಗೋವಾದಿಂದ ಲಖನೌಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಪತ್ನಿಯೊಂದಿಗೆ ಜಗಳವಾಡಿ ಪಾಟ್ನಾದಲ್ಲೇ ವಿಮಾನದಿಂದ ಇಳಿದು ಹೋಗಿದ್ದಾರೆ. ವೈಮಾನಿಕ ಭದ್ರತೆಯಲ್ಲಿ ಉಂಟಾಗಿರುವ ಗಂಭೀರ ಲೋಪವೆಂದು ಪರಿಗಣಿಸಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಈ ಬಗ್ಗೆ ವರದಿ ಸಲ್ಲಿಸುವಂತೆ ಇಂಡಿಗೋ ವಿಮಾನಯಾನ ಸಂಸ್ಥೆಗೆ ನೊಟೀಸ್ ನೀಡಿದೆ. ಇದೇ ವೇಳೆ ಇಂಡಿಗೋ ವಿಮಾನಯಾನ ಸಂಸ್ಥೆ ಘಟನೆಯ ಕುರಿತು ಆಂತರಿಕ ತನಿಖೆಗೆ ಆದೇಶಿಸಿದೆ.

ಪತ್ನಿಯೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ಮುದಿತ್ ಶರ್ಮ ಗೋವಾದಿಂದ ಕೋಲ್ಕತಾ ಮೂಲಕ ಲಖನೌಗೆ ತೆರಳುವ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯದಲ್ಲಿ ಸತಿ-ಪತಿ ನಡುವೆ ಜಗಳ ಆರಂಭವಾಗಿತ್ತು. 30 ನಿಮಿಷಗಳ ವಿಶ್ರಾಂತಿಗೆಂದು ಇಂಡಿಗೋ ವಿಮಾನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾಗ ಪತ್ನಿಯನ್ನು ವಿಮಾನದಲ್ಲೇ ಬಿಟ್ಟ ಮುದಿತ್ ಶರ್ಮ ವಿಮಾನದಿಂದ ಇಳಿದು ಹೋಗಿದ್ದರು. ವಿಮಾನ ಮರುಹಾರಾಟಕ್ಕೆ ಸಜ್ಜಾದರೂ ಆತ ಹಿಂದಿರುಗದೇ ಇದ್ದಾಗ ವಿಮಾನದಲ್ಲಿದ್ದ ಆತನ ಪತ್ನಿ ಈ ವಿಷಯವನ್ನು ವಿಮಾನದ ಸಿಬ್ಬಂದಿಯ ಗಮನಕ್ಕೆ ತಂದರು.

ತಕ್ಷಣವೇ ಮೊಬೈಲ್ ಫೋನ್​ಗೆ ಕರೆ ಮಾಡಿ ಮುದಿತ್ ಶರ್ಮ ಅವರನ್ನು ವಾಪಸು ಕರೆಸುವ ವಿಮಾನ ಸಿಬ್ಬಂದಿಯ ಪ್ರಯತ್ನ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ವಿಮಾನ ಸುಮಾರು 30 ನಿಮಿಷಗಳಷ್ಟು ತಡವಾಗಿ ಲಖನೌನತ್ತ ಪ್ರಯಾಣ ಬೆಳೆಸಿತು.

Write A Comment