ರಾಷ್ಟ್ರೀಯ

ಸಿಬಿಐ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ: ಕೇಜ್ರಿವಾಲ್

Pinterest LinkedIn Tumblr

narendra-modi-and-kejriwalಹೊಸದಿಲ್ಲಿ, ಡಿ.15: ‘‘ಸಿಬಿಐ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಅವರು ನನ್ನ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ’’ಎಂದು ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

‘‘ಸಿಬಿಐ ಅಧಿಕಾರಿಗಳು ನನ್ನ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಜಕೀಯವಾಗಿ ನನ್ನನ್ನು ಮಣಿಸಲು ಸಿಬಿಐ ಅಧಿಕಾರಿಗಳನ್ನು ಬಳಸಿದ್ದಾರೆ’’ ಎಂದು ಹೇಳಿದ್ದಾರೆ.

‘‘ಇದೊಂದು ಪ್ರಧಾನಿ ಮೋದಿಯ ಹೇಡಿತನ . ಅವರಿಗೆ ರಾಜಕೀಯವಾಗಿ ನನ್ನನ್ನು ನೇರವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಸಿಬಿಐ ಮೂಲಕ ದಾಳಿ ನಡೆಸಲಾಗಿದೆ. ಮೋದಿಗೆ ಯಾವ ಕಡತ ಬೇಕು ನಾನು ಕೊಡುತ್ತೇನೆ ’ಎಂದು ಮುಖ್ಯ ಮಂತ್ರಿ ಕೇಜ್ರಿವಾಲ್ ಟ್ವಿಟ್ ಮಾಡಿದ್ಧಾರೆ.

ರಾಜ್ಯಸಭೆ,ಲೋಕಸಭೆಯಲ್ಲಿ ಗದ್ದಲ :ಸಿಎಂ ಅರವಿಂದ್ ಕೇಜ್ರಿವಾಲ್ ಕಚೇರಿ ಮೇಲೆ ನಡೆದ ಸಿಬಿಐ ದಾಳಿ ಪ್ರಕರಣ  ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದೆ. ಕೇಂದ್ರ ಸರಕಾರ ಮತ್ತು ದಿಲ್ಲಿ ಸರಕಾರ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

Write A Comment