ರಾಷ್ಟ್ರೀಯ

ಐಎಸ್ ಉಗ್ರರ ಸಂಪರ್ಕದ ಶಂಕೆ ಮೇಲೆ ಬಂಧಿಸಿದ್ದ ಯುವಕರ ಬಿಡುಗಡೆ

Pinterest LinkedIn Tumblr

isiಶ್ರೀನಗರ, ಡಿ.13- ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಜೊತೆ ಅಂತರ್ಜಾಲದ ಮೂಲಕ ಸಂಪರ್ಕ ಹೊಂದಿದ್ದರೆಂದು ಶಂಕಿಸಲಾದ ಜಮ್ಮು-ಕಾಶ್ಮೀರದ ಕೆಲ ಯುವಕರನ್ನು ಕಳೆದ ತಿಂಗಳ ಪ್ರಧಾನಿ ನರೇಂದ್ರಮೋದಿ ಭೇಟಿ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಲಾಗಿತ್ತು.

ಯುವಕರನ್ನು ದೀರ್ಘ ವಿಚಾರಣೆ ನಡೆಸಿದ ಬಳಿಕ ಅವರಿಂದ ಪೂರ್ಣ ಮಾಹಿತಿ ಪಡೆದ ಪೊಲೀಸರು ಅವರಿಗೆಲ್ಲ ಐಎಸ್ ನಿಂದಾಗುವ ಅಪಾಯಗಳು ಮತ್ತು ಅನ್ಯಾಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಅವರಿಗೆ ವಿವೇಕ ಹೇಳಿ ಎಚ್ಚರಿಕೆ ನೀಡಿ ತಂದೆ-ತಾಯಿಗಳ ಸುಪರ್ದಿಗೆ ಒಪ್ಪಿಸಿದ್ದಾರೆ.

ಒಟ್ಟಾರೆ ಜಮ್ಮು-ಕಾಶ್ಮೀರ ಯುವಕರು ಅಷ್ಟಾಗಿ ಐಎಸ್ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಎಲ್ಲೋ ಕೆಲವರು ಮಾತ್ರವೇ ಐಎಸ್ ನೊಂದಿಗೆ ಸಂಪರ್ಕ ಹೊಂದಿದ್ದರು. ಅಂಥ ಕೆಲವೇ ಯುವಕರು ಐಎಸ್ ಬೆಂಬಲಿಗರ ಸಂಪರ್ಕ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯುವಕರು ಅಂತರ್ಜಾಲದ ಮೂಲಕ ಐಎಸ್ ಬೆಂಬಲಿಗರ ಸಂಪರ್ಕ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲ ಶಂಕಿತರನ್ನು ಕಳೆದ ತಿಂಗಳು ಪ್ರಧಾನಿ ಭೇಟಿ ಸಂದರ್ಭ ವಶಕ್ಕೆ ಪಡೆಯಲಾಗಿತ್ತು. ನ.7 ರಂದು ಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು.

Write A Comment