ರಾಷ್ಟ್ರೀಯ

ಭಾರತದ ಪ್ರಗತಿಯ ವೇಗಕ್ಕೆ ಜಪಾನ್ ಸಾಥ್

Pinterest LinkedIn Tumblr

Modi-Shinzo-Abeನವದೆಹಲಿ: ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕುವುದರೊಂದಿಗೆ ಜಪಾನ್ ಪ್ರಧಾನಿ ಶಿನ್ಜೋ ಅಬೆ ಅವರ ಭಾರತ ಪ್ರವಾಸವು ಯಶಸ್ವಿಯಾಗಿದೆ. ಬುಲೆಟ್ ರೈಲು, ನಾಗರಿಕ ಪರಮಾಣು,  ರಕ್ಷಣಾ ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ-ಜಪಾನ್ ಶನಿವಾರ ಒಪ್ಪಂದ ಮಾಡಿಕೊಂಡಿದೆ.

ಇದೇ ವೇಳೆ, ಭಾರತ ಒಂದು ವೇಳೆ ಪರಮಾಣು ಪರೀಕ್ಷೆ ನಡೆಸಿದ್ದೇ ಆದಲ್ಲಿ, ಸಹಕಾರದ ಬಗ್ಗೆ ಮರುಪರಿಶೀಲನೆ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಜಪಾನ್ ನೀಡಿದೆ. ನಂತರ  ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಾವು ಸಹಿ ಹಾಕಿರುವ ನಾಗರಿಕ ಅಣು ಇಂಧನ ಸಹಕಾರ ಒಪ್ಪಂದವು, ಕೇವಲ ವಾಣಿಜ್ಯ ಮತ್ತು ಶುದ್ಧಇಂಧನವಷ್ಟೇ ಅಲ್ಲ, ವಿಶ್ವಶಾಂತಿ ಮತ್ತು  ಸುರಕ್ಷತೆಗಾಗಿ ಉಭಯರಾಷ್ಟ್ರಗಳ ನಡುವಿನ ಪರಸ್ಪರ ವಿಶ್ವಾಸಾರ್ಹತೆ ಮತ್ತು ಪಾಲುಗಾರಿಕೆಯ ತಂತ್ರಗಾರಿಕೆಯ ಪ್ರತಿಬಿಂಬ” ಎಂದರು.

ರಕ್ಷಣಾ ಒಪ್ಪಂದವು ಸುರಕ್ಷತಾ ಸಹಕಾರದಲ್ಲಿ ಒಂದು ನಿರ್ಣಾಯಕ ಹೆಜ್ಜೆ, ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಪಡಿಸಿ, ಭಾರತದಲ್ಲಿ ರಕ್ಷಣಾ ಸಲಕರಣೆಗಳ ಉತ್ಪಾದನೆ ಉತ್ತೇಜಿಸಲಿದೆ. ಈ  ಒಪ್ಪಂದವು ಉಭಯ ದೇಶಗಳ ಮೂರು ವಿಭಾಗಗಳ ಸೇನಾಮುಖ್ಯಸ್ಥರ ಹಂತದ ಮಾತುಕತೆ ವಿಸ್ತರಣೆಗೆ ಸಹಕಾರಿಯಾಗಲಿದ್ದು, ಮಲಬಾರ್ ಕಡಲಲ್ಲಿ ಜಪಾನ್ ನಮ್ಮ ಪಾಲುದಾರ  ಮಿತ್ರನಾಗಲಿದೆ ಎಂದರು. ವೇಗ, ವಿಶ್ವಾಸಾರ್ಹತೆ ಮತ್ತು ರಕ್ಷಣೆಗೆ ಹೆಸರಾಗಿರುವ ಸಿಂಕನ್‍ಷೆನ್ ಮೂಲಕ ಜಾರಿಗೊಳಿಸುತ್ತಿರುವ ಮುಂಬೈಅಹ್ಮದಾಬಾದ್ ನಡುವಿನ ಬುಲೆಟ್ ರೈಲು ಮಾರ್ಗ  ಯೋಜನೆಯು ಒಂದು ಐತಿಹಾಸಿಕ ನಿರ್ಧಾರ ಎಂದ ಮೋದಿ ಅವರು, ಜಪಾನ್ ನೀಡುತ್ತಿರುವ 12 ಬಿಲಿಯನ್ ಡಾಲರ್ ಮೆದು ಸಾಲ ಮತ್ತು ತಾಂತ್ರಿಕ ನೆರವನ್ನು ಶ್ಲಾಘಿಘಿಸಿದರು.

ವೀಸಾ ಆನ್ ಅರೈವಲ್: ಮಾತುಕತೆ ನಂತರ ಜಪಾನ್ ದೇಶದ ವಿಶೇಷ ಸಂಬಂಧದ ದ್ಯೋತಕವಾಗಿ ಆ ದೇಶದ ನಾಗರಿಕರಿಗೆ ಮಾ.1, 2016ರಿಂದ ವೀಸಾ ಆನ್ ಅರೈವಲ್ (ದೇಶಕ್ಕಾಗಮಿಸಿ  ವೀಸಾ ಪಡೆವ) ಸೌಲಭ್ಯವನ್ನು ಪ್ರಧಾನಿ ಘೋಷಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಪಾನ್ ಪ್ರಧಾನಿ ಅಬೆ, ನಮ್ಮ ದ್ವಿಪಕ್ಷೀಯ ಒಪ್ಪಂದವು ಹೊಸ ಹಂತ ತಲುಪಿದ್ದು, ನಮ್ಮ ಸಂಬಂಧದ ಮೊಗ್ಗು  ಈಗ ಹೂವಾಗಿ ಅರಳಿದೆ ಎಂದು ಬಣ್ಣಿಸಿದರು. ಮುಕ್ತ ನೌಕ ಸಂಚಾರ, ವಾಯು ಸಂಚಾರ ಮತ್ತು ಅಡೆತಡೆ ರಹಿತ ನೌಕಾ ವಾಣಿಜ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ, ಯಾವುದೇ ವಿವಾದ ಬಂದರೂ  ಅದನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಾಗಿ ನಾವು ನಂಬಿದ್ದೇವೆ, ಎಲ್ಲ ರಾಷ್ಟ್ರಗಳು ಅಂತಾರಾಷ್ಟ್ರೀಯ ನೌಕಾವಲಯ ಕಾನೂನಿಗೆ ಬದ್ಧರಾಗಿರಬೇಕು ಎಂದು ಬಯಸುತ್ತೇವೆ ಎಂದು  ಮೋದಿ ನುಡಿದರು.

ಇದೇ ವೇಳೆ, ಎಪಿಇಸಿ(ಏಷ್ಯಾ ಪದuಫಿಕ್ ಎಕಾನಮಿಕ್ ಕೋಆಪರೇಷನ್) ಸದಸ್ಯತ್ವ ಪಡೆಯಲು ಅಬೆ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ ಮೋದಿ, ಭಾರತವು ವಿಶ್ವಸಂಸ್ಥೆ ರ ಕ್ಷಣಾ  ಮಂಡಳಿಯಲ್ಲೂ ಸದಸ್ಯತ್ವ ಪಡೆಯಲು ಎಲ್ಲ ಪ್ರಯತ್ನ ಮುಂದುವರಿಸಲಿದೆ ಎಂದರು. ಇದೇ ಸಂದರ್ಭದಲ್ಲಿ ಉಭಯ ನಾಯಕರು, ಭಾರತ ಜಪಾನ್ ವಿಷನ್ 2025 ವಿಶ್ವ, ಇಂಡೋ  ಪೆಸಿಫಿಕ್‍ವಲಯ ಮತ್ತು ವಿಶ್ವದ ಶಾಂತಿ, ಅಭ್ಯುದಯಕ್ಕಾಗಿ ವಿಶೇಷ ತಂತ್ರಗಾರಿಕೆ ಮತ್ತು ಪಾಲುದಾರಿಕೆ ಕುರಿತು ಜಂಟಿ ಹೇಳಿಕೆ ನೀಡಿದರು. ಅಣುಶಕ್ತಿಯನ್ನು ನಾಗರಿಕ ಶಾಂತಿಗಾಗಿ  ಬಳಕೆಮಾಡುವ ಒಪ್ಪಂದವನ್ನು ಉಭಯ ದೇಶಗಳ ಪ್ರಧಾನಿಗಳು ಸ್ವಾಗತಿಸಿದ್ದಾರೆ. ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಸಂಬಂಧ ಒಪ್ಪಂದಗಳಿಗೆ ಸಹಿ ಹಾಕಲಾಗುವುದು  ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತ ಮತ್ತು ಜಪಾನ್ ರಾಷ್ಟ್ರಗಳು ಪ್ರಾದೇಶಿಕ ಆರ್ಥಿಕ ಮತ್ತು ಸುರಕ್ಷತಾ ವೇದಿಕೆಯನ್ನು ಬಲಪಡಿಸಲು ಹಾಗೂ ಜಾಗತಿಕ ಸವಾಲುಗಳಾದ ವಿಶ್ವಸಂಸ್ಥೆ ಸುರಕ್ಷತಾ ಸುಧಾರಣೆ, ಜಾಗತಿಕ  ವಾತಾವರಣ ಬದಲಾವಣೆ ಹಾಗೂ ಭಯೋತ್ಪಾದನೆಯನ್ನು ಎದುರಿಸಲು ಒಗ್ಗಟ್ಟಾಗಿ ಮತ್ತು ಸಮನ್ವಯತೆಂುÉೂಂದಿಗೆ ಕೆಲಸ ಮಾಡುವುದಾಗಿ ಉಭಯ ನಾಯಕರು ತಿಳಿಸಿದ್ದಾರೆ.  ವಿವಾದಾತ್ಮಕ ಅಣುಶಕ್ತಿ ಕಾರ್ಯಕ್ರಮಕ್ಕೆ ಸಂಬಂಧಿಸಿ ಉತ್ತರ ಕೊರಿಯಾವು ವಿಶ್ವಸಂಸ್ಥೆ ನಿರ್ಣಯಗಳಿಗೆ ಬದ್ಧವಾಗಿ, ಇತರೆ ಅಂತಾರಾಷ್ಟ್ರೀಯ ಕಟ್ಟುಪಾಡುಗಳನ್ನು ಪಾಲಿಸುವಂತೆ  ಒತ್ತಾಯಿಸಿದ್ದಾರೆ.

ಹೈಸ್ಪೀಡ್ ಅಭಿವೃದ್ಧಿ: ಮೋದಿ ಬಣ್ಣಿಸಿದ ಅಬೆ ನಮಗೆ ಅತಿವೇಗದ ರೈಲು ಮಾತ್ರವಷ್ಟೆ ಅಲ್ಲ, ಅತಿವೇಗದ ಅಭಿವೃದ್ಧಿಯೂ ಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತದ ಮತ್ತು ಜಪಾನ್  ದೇಶದ ಪ್ರಮುಖ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಮೋದಿ, ಜಪಾನ್ ದೇಶವು ಮೇಕ್ ಇನ್ ಇಂಡಿಯಾಗೆ ನೆರವು ನೀಡುತ್ತಿರುವುದು ಸಂತಸ ತಂದಿದೆ. ಜಪಾನ್ 12 ಶತಕೋಟಿ  ಡಾಲರ್‍ಗಳನ್ನು ಈ ಯೋಜನೆಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಜಪಾನ್ ಇದೇ ಮೊದಲ ಬಾರಿಗೆ ಮಾರುತಿ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ನಮಗೆ ಅತ್ಯಂತ  ಹೆಮ್ಮೆಯ ಕ್ಷಣ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿ, ಜಪಾನ್ ಪ್ರಧಾನಿ ಶಿನ್ಜೋ ಅಬೆ, ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳು ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ  ಶಿಂಕನ್‍ಷೆನ್ ಹೈಸ್ಪೀಡ್ ರೈಲಿನಂತೆ ಎಂದು ಬಣ್ಣಿಸಿದರು. ಪ್ರಬಲ ಭಾರತವು ಜಪಾನ್‍ಗೆ ಪೂರಕ ಮತ್ತು ಪ್ರಬಲ ಜಪಾನ್ ಭಾರತಕ್ಕೆ ಪೂರಕ ಎಂದೂ ಹೇಳಿದರು. ಗಂಗಾ ಆರತಿ ಸಂಭ್ರಮ:  ಸಂಜೆ ಪ್ರಧಾನಿ ಮೋದಿ ಹಾಗೂ ಅಬೆ ಅವರು ವಾರಾಣಸಿಯ ದಶಾಶ್ವಮೇಧ ಘಾಟ್‍ಗೆ ತೆರಳಿ ಸಾಂಪ್ರದಾಯಿಕ ಗಂಗಾಆರತಿ ನಡೆಸಿದರು. ಇಲ್ಲಿ ನಡೆದ ಅದ್ಭುತ ಸಾಂಸ್ಕೃತಿಕ  ಕಾರ್ಯಕ್ರಮಗಳಿಗೂ ಇವರು ಸಾಕ್ಷಿಯಾದರು. ಬಳಿಕ ಉಭಯ ನಾಯಕರು ಸಸ್ಯಾಹಾರಿ ಬನಾರಸಿ ಭೋಜನ ಸವಿದರು. ಉತ್ತರಪ್ರದೇಶ ಸಿಎಂ ಅಖಿಲೇಶ್, ಗವರ್ನರ್ ರಾಮ ನಾಯಕ್ ಮತ್ತು ರಾಜ್ಯ ಸಚಿವರು ಪಾಲ್ಗೊಂಡಿದ್ದರು.

Write A Comment