ಚೆನ್ನೈ, ಡಿ.132: ತಮಿಳುನಾಡಿನಲ್ಲಿ ಭಾರಿ ಮಳೆಗೆ ಜೀವತೆತ್ತ ಕುಟುಂಬದವರಿಗೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ತಲಾ 4 ಲಕ್ಷ ರೂ.ಗಳ ಪರಿಹಾರ ಪ್ರಕಟಿಸಿದ್ದಾರೆ.
ಚೆನ್ನೈ ಸೇರಿದಂತೆ ತಮಿಳುನಾಡಿದ ವಿವಿಧೆಡೆ ಬಿರುಮಳೆಗೆ 23 ಮಂದಿ ಮೃತಪಟ್ಟಿದ್ದು, ಮೃತ ಕುಟುಂಬದವರಿಗೆ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಜಯಲಲಿತಾ ಹೇಳಿದರು.
ಈ ಮಳೆಯಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಮುಖ್ಯಮಂತ್ರಿ ಜಯಲಲಿತಾ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಬಿರು ಮಳೆಯಿಂದ ಮನೆ ಕುಸಿದು, ವಿದ್ಯುತ್ ಅಪಘಾತ, ನೆರೆಯಲ್ಲಿ ಕೊಚ್ಚಿಹೋದ ಪ್ರಕರಣಗಳಲ್ಲಿ ಒಟ್ಟು 23 ಮಂದಿ ಇದುವರೆಗೂ ಮೃತಪಟ್ಟಿದ್ದಾರೆ.