ರಾಷ್ಟ್ರೀಯ

ಬರಿಗಾಲಿನ ರಾಹುಲ್ ಗೆ ಚಪ್ಪಲಿ ನೀಡಿದ “ಕೈ” ಹಿರಿಯ ಮುಖಂಡ ! ವೈರಲ್ ಆಗಿದೆ ವೀಡಿಯೋ…ಏನಿದು ಘಟನೆ ? ಇಲ್ಲಿದೆ ನೋಡಿ

Pinterest LinkedIn Tumblr

Former-minister-holds-slippers-for-Rahul-Gandhi

ಪುದುಚೇರಿ: ಕುಂಭದ್ರೋಣ ಮಳೆಯ ಪರಿಣಾಮ ಪ್ರವಾಹಕ್ಕೀಡಾಗಿರುವ ತಮಿಳುನಾಡನ್ನು ಪ್ರತ್ಯಕ್ಷವಾಗಿ ನೋಡಲು ಹೋಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಚಪ್ಪಲಿಯನ್ನು ನೀಡಿ ಭಕ್ತಿ ಪ್ರದರ್ಶಿಸಿರುವ ಘಟನೆ ಮಂಗಳವಾರ ನಡೆದಿರುವುದಾಗಿ ತಿಳಿದುಬಂದಿದೆ.

ನಿನ್ನೆ ಪುದುಚೇರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ತಾವು ಹಾಕಿಕೊಂಡಿದ್ದ ಶೂವನ್ನು ಬಿಚ್ಚಿಟ್ಟು ಬರಿಗಾಲಿನಲ್ಲಿ ನಡೆಯಲು ಮುಂದಾಗಿದ್ದಾರೆ. ಈ ವೇಳೆ ರಾಹುಲ್ ಬರಿಗಾಲಿನಲ್ಲಿದುದ್ದನ್ನು ಕಂಡ ಮಾಜಿ ಕೇಂದ್ರ ಸಚಿವರ ವಿ. ನಾರಾಯಣಸಾಮಿ ಅವರು ರಾಹುಲ್ ಗೆ ತಾವು ತೊಟ್ಟಿದ್ದ ಚಪ್ಪಲಿಯನ್ನು ಬಿಟ್ಟು ರಾಹುಲ್ ಕಾಲಿಗೆ ತೊಡಿಸಲು ಹೋಗಿದ್ದಾರೆ.

ಸಾರ್ವಜನಿಕವಾಗಿ ನೂರಾರು ಮಂದಿಯ ಎದುರು ನಾರಾಯಣಸಾಮಿ ರಾಹುಲ್ ಗೆ ತೋರಿದ ಭಕ್ತಿ ವೀಡಿಯೋ ಇದೀಗ ವೈರಲ್ ಆಗಿದ್ದು, ವೀಡಿಯೋದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಓಡಾಡುವ ಸಲುವಾಗಿ ರಾಹುಲ್ ತಮ್ಮ ಶೂ ಬಿಚ್ಚಿದ್ದರೆ, ನಾರಾಯಣಸಾಮಿ ಅವರು ತಮ್ಮ ಚಪ್ಪಲಿ ನೀಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾರಾಯಣಸಾಮಿ ಅವರು, ರಾಹುಲ್ ಅವರು ಬರಿಗಾಲಿನಲ್ಲಿ ಓಡಾಡುತ್ತಿರುವುದನ್ನು ಕಂಡ ನಾನು ಸೌಜನ್ಯಕ್ಕಾಗಿ ಅವರಿಗೆ ನನ್ನ ಚಪ್ಪಲಿಯನ್ನು ನೀಡಿದ್ದೆ. ಇದರಲ್ಲಿ ಅವರ ತಪ್ಪೇನು ಇಲ್ಲ. ಸಂತ್ರಸ್ತರನ್ನು ಭೇಟಿ ಮಾಡುವಾಗಲೂ ರಾಹುಲ್ ಶೂ ಇಲ್ಲದೆ ಓಡಾಡಿದ್ದರು. ಅವರ ಶೂವನ್ನು ಅವರ ಕೈಯಲ್ಲೇ ಹಿಡಿದು ಓಡಾಡಿದರು. ಭದ್ರತಾ ಸಿಬ್ಬಂದಿಗಳ ಕೈಗೂ ಕೊಡಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ವೀಡಿಯೋ ದೃಶ್ಯಾವಳಿ ಕಂಡ ಜನರು ಕಾಂಗ್ರೆಸ್’ಗೆ ಸಂಸ್ಕೃತಿಯಿಲ್ಲ ಎಂಬ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಪಕ್ಷದಲ್ಲಿ ಆ ರೀತಿ ಸಂಸ್ಕೃತಿಗಳೇನೂ ಇಲ್ಲ ಎಂದು ಹೇಳಿದ್ದಾರೆ.

ನಾರಾಯಣಸ್ವಾಮಿ ಮನಮೋಹನ್ ಸರ್ಕಾರದಲ್ಲಿ ಪ್ರಧಾನಿ ಕಚೇರಿಯ ಸಚಿವರಾಗಿದ್ದರು. ಇನ್ನು ರಾಹುಲ್ ನಿನ್ನೆ ಚೆನ್ನೈ, ಪುದುಚೇರಿಗಳಲ್ಲಿ ಪ್ರವಾಹ ಸಂತ್ರಸ್ತರ ಕಷ್ಟ ಆಲಿಸಲು ಹೋಗಿದ್ದರು.

Write A Comment