ರಾಷ್ಟ್ರೀಯ

ಉತ್ತರ ಭಾರತದಲ್ಲಿ 7.2 ರಷ್ಟು ತೀವ್ರತೆಯ ಭೂಕಂಪ

Pinterest LinkedIn Tumblr

earthನವದೆಹಲಿ: ಉತ್ತರ ಭಾರತದಲ್ಲಿ 7.2 ರಿಕ್ಟರ್ ಪ್ರಮಾಣದ ಭೂಕಂಪ ಸಂಭವಿಸಿದ್ದು, ಜಮ್ಮು ಕಾಶ್ಮಿರ, ಪಂಜಾಬ್, ಪಾಕಿಸ್ತಾನದ ಪೇಶಾವರ್, ಇಸ್ಲಾಮಾಬಾದ್, ದೆಹಲಿ, ಬಿಹಾರ್, ಹಿಮಾಚಲ್ ಪ್ರದೇಶದಲ್ಲಿ ಭೂಮಿ ನಡುಗಿದ ಘಟನೆಗಳು ವರದಿಯಾಗಿವೆ.

ಪಾಕಿಸ್ತಾನ, ಪೂರ್ವ ಉಜ್ಬೇಕಿಸ್ತಾನ್ ಮತ್ತು ಪೂರ್ವ ತಾಜಿಕೀಸ್ತಾನ್ ದೇಶಗಳಲ್ಲಿ ಭೂಕಂಪ ತೀವ್ರತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಭೂಕಂಪದ ಕೇಂದ್ರಬಿಂದು ಆಗ್ನೇಯ ಕರಾಕುಲ್‌ನಿಂದ 111 ಕಿ.ಮೀ ದೂರದಲ್ಲಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಭೂಕಂಪವಾದ ಅನುಭವಾಗುತ್ತಿದ್ದಂತೆ ಶ್ರೀನಗರ್ ಮತ್ತು ಚಂಡೀಗಢ್‌ಗಳಲ್ಲಿ ಜನತೆಯ ಭೀತಿಯಿಂದಾಗಿ ಮನೆಯಿಂದ ಹೊರಗೊಡಿ ಬಂದ ಘಟನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

Write A Comment