ರಾಷ್ಟ್ರೀಯ

ಹೋಟೆಲ್‌ನಲ್ಲಿ ಸೆಕ್ಸ್ ರಾಕೆಟ್: ಯುವತಿಯರು ಸೇರಿದಂತ 30 ಜನರ ಬಂಧನ

Pinterest LinkedIn Tumblr

rrfಜೆಹಾನಾಬಾದ್(ಬಿಹಾರ್),: ಮಾಹಿತಿಯ ಮೂಲದ ಜಾಡು ಹಿಡಿದ ಪೊಲೀಸರು ಆರ್ರಾ ಜಿಲ್ಲೆಯಲ್ಲಿರುವ ಹೋಟೆಲ್ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿಯರು ಸೇರಿದಂತೆ 30 ಜನರನ್ನು ಬಂಧಿಸಿದ್ದಾರೆ.

ಹೆವನ್ ರೆಸ್ಟುರಾಂಟ್‌ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 12 ಬಾಲಕಿಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, 18 ಬಾಲಕರು ಸೆರೆಸಿಕ್ಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಎಸ್‌ಪಿ ರೇಣುಕೃಷ್ಣಾ ನೇತೃತ್ವದಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಲಾಯಿತು ಎಂದು ಎಎಸ್‌ಪಿ ಮೊಹಮ್ಮದ್ ಸಾಜಿದ್ ತಿಳಿಸಿದ್ದಾರೆ.

ಪೊಲೀಸರು ಹೋಟೆಲ್‌ ಮಾಲೀಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರು ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment