ರಾಷ್ಟ್ರೀಯ

ಮೋದಿ ಸರ್ಕಾರದ ‘ಗೋಲ್ಡ್‌ಬಾಂಡ್’ ಯೋಜನೆಗೆ ತಿರುಪತಿ ತಿಮ್ಮಪ್ಪನ 5.5 ಸಾವಿರ ಟನ್ ಚಿನ್ನ..!

Pinterest LinkedIn Tumblr

Tirumalatemple

ತಿರುಪತಿ, ಡಿ.5: ಪ್ರಧಾನಮಂತ್ರಿ ನರೇಂದ್ರಮೋದಿಯವರ ಬಹು ಉದ್ದೇಶಿತ ಗೋಲ್ಡ್‌ಬಾಂಡ್ ಯೋಜನೆಗೆ ದೇಶದ ಶ್ರೀಮಂತ ದೇವಸ್ಥಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಪತಿ ತಿರುಮಲ ಬಹುದೊಡ್ಡ ಕೊಡುಗೆಯನ್ನು ನೀಡಲು ಮುಂದೆ ಬಂದಿದೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿರುವ ಸುಮಾರು 5.5 ಸಾವಿರ ಟನ್ ಬಂಗಾರವನ್ನು ಗೋಲ್ಡ್‌ಬಾಂಡ್ ಯೋಜನೆಗೆ ಒಳಪಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.

ಈಗಾಗಲೇ ಕೈಗೊಂಡಿರುವ ತೀರ್ಮಾನದಂತೆ 5.5 ಸಾವಿರ ಟನ್ ಬಂಗಾರವನ್ನು ಬ್ಯಾಂಕ್‌ನಲ್ಲಿ ಅಡವಿಡಲು ಆಡಳಿತ ಮಂಡಳಿ ಮುಂದೆ ಬಂದಿದೆ. ಸುಮಾರು ಐದು ಸಾವಿರ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಭಕ್ತರು ಯಥೇಚ್ಛವಾಗಿ ನೀಡಿರುವ ಬಂಗಾರವನ್ನು ಬ್ಯಾಂಕಿನಲ್ಲಿಟ್ಟರೆ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಬಡ್ಡಿ ರೂಪದಲ್ಲಿ ಜಮಾ ಮಾಡಲಾಗುತ್ತದೆ.

ಆಂಧ್ರ ಪ್ರದೇಶದ ಹಣಕಾಸು ಸಚಿವ ರಾಮಕೃಷ್ಣಡು ಹಾಗೂ ಆಡಳಿತ ಮಂಡಳಿ ಈಗಾಗಲೇ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ. ಒಂದು ಅಂದಾಜಿನ ಪ್ರಕಾರ, ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 20 ಸಾವಿರ ಟನ್‌ಗೂ ಅಧಿಕ ಬಂಗಾರವಿದೆ. ಪ್ರತಿದಿನ ದೇಶ-ವಿದೇಶಗಳಿಂದ ಭಕ್ತರು ಕೆಜಿಗಟ್ಟಲೆ ತಮ್ಮ ಹರಕೆ ಈಡೇರಿಸಿಕೊಳ್ಳಲು ದಾನದ ರೂಪದಲ್ಲಿ ನೀಡಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಕಳೆದ ಹಲವಾರು ವರ್ಷಗಳಿಂದಲೂ ಲಕ್ಷಾಂತರ ಭಕ್ತರು ಆಭರಣ, ಚಿನ್ನದ ನಾಣ್ಯ ದಾನವಾಗಿ ನೀಡಿರುವುದು 20 ಸಾವಿರ ಟನ್‌ಗೂ ಅಧಿಕವಾಗುತ್ತದೆ. ಪ್ರಧಾನಮಂತ್ರಿಯವರ ಗೋಲ್‌್್ಬಾಂಡ್ ಯೋಜನೆ ವ್ಯಾಪ್ತಿಯಲ್ಲಿ ನಾವು 5.5 ಸಾವಿರ ಟನ್ ಬಂಗಾರವನ್ನು ಬ್ಯಾಂಕ್‌ಗೆ ನೀಡಲಿದ್ದೇವೆ. ಇದಕ್ಕೆ ಪ್ರತಿಯಾಗಿ ಶೇ.2.5ರಷ್ಟು ಬಡ್ಡಿ ಹಣ ಆಡಳಿತ ಮಂಡಳಿಗೆ ಸೇರುತ್ತದೆ ಎಂದು ಆಡಳಿತ ಮಂಡಳಿಯ ಕಾರ್ಯಕಾರಿಣಿ ಅಧಿಕಾರಿ ಡಾ.ಸಾಂಬಶಿವರಾವ್ ತಿಳಿಸಿದ್ದಾರೆ.

ನಾವು ಈ ಹಿಂದೆ ಅನೇಕ ಬ್ಯಾಂಕ್‌ಗಳಲ್ಲಿ ಚಿನ್ನವನ್ನು ಅಡವಿಟ್ಟಿದ್ದೆವು. ಈಗ ಪ್ರಧಾನಮಂತ್ರಿಯವರೇ ಈ ಯೋಜನೆ ಜಾರಿಗೆ ತಂದಿರುವುದರಿಂದ ದೇವಸ್ಥಾನದಲ್ಲಿರುವ ಬಂಗಾರವನ್ನು ಬ್ಯಾಂಕ್‌ಗೆ ನೀಡಲಿದ್ದೇವೆ. ವಾರ್ಷಿಕವಾಗಿ ನಮಗೆ ಶೇ.2.5ರಷ್ಟು ಬಡ್ಡಿ ದೊರಕಲಿದ್ದು, ಇನ್ನೊಂದು ವಾರದಲ್ಲಿ ಅಂತಿಮ ಒಪ್ಪಂದ ಮುಗಿಯಲಿದೆ ಎಂದು ತಿಳಿಸಿದ್ದಾರೆ.

Write A Comment