ರಾಷ್ಟ್ರೀಯ

ಕೇರಳ ಕಾನ್ವೆಂಟ್‌ ಕ್ರೈಸ್ತ ಸನ್ಯಾಸಿನಿಯ ನಿಗೂಢ ಸಾವು; ಬಾವಿಯಲ್ಲಿ ಶವ

Pinterest LinkedIn Tumblr

Nunsಕೊಚ್ಚಿ: ಕೇರಳದ ಇಡುಕ್ಕಿ ಜಿಲ್ಲೆಯ ವಾಗಮೋನ್‌ ಎಂಬಲ್ಲಿಗೆ ಸಮೀಪದ ತನ್ನ  ಕಾನ್ವೆಂಟ್‌ ಬಾವಿಯಲ್ಲಿ ಕ್ಯಾಥೊಲಿಕ್‌ ನನ್‌ (ಕ್ರೈಸ್ತ ಸನ್ಯಾಸಿನಿ) ಒಬ್ಬರ ಶವ ಪತ್ತೆಯಾಗಿದೆ.

ಮೃತ ನನ್‌ ಅವರನ್ನು 33ರ ಹರೆಯದ ಸ್ಟೆಲ್ಲಾ ಮರಿಯಾ ಎಂದು ಗುರುತಿಸಲಾಗಿದೆ. ಈಕೆ ವಾಗಮೋನ್‌ನಿಂದ ಹತ್ತು ಕಿ.ಮೀ. ದೂರದ ಉಳಪುನ್ನಿ ಎಂಬಲ್ಲಿ ಸೇಕ್ರೆಡ್‌ ಹಾರ್ಟ್‌ ಕಾನ್ವೆಂಟ್‌ನ ಸದಸ್ಯ.

ನನ್‌ ಮರಿಯಾ ಅವರ ಸಾವು ನಿಗೂಢವಾಗಿದ್ದು ತನಿಖಾಧಿಕಾರಿಗಳ ತಂಡ ಇಲ್ಲಿಗೆ ಧಾವಿಸಿ ಬಂದಿದೆ. ಅಲ್ಲದೆ ಜಿಲ್ಲಾ ಪೊಲೀಸರ ಭಾರೀ ದೊಡ್ಡ ತಂಡವೊಂದು ಕೂಡ ಇಲ್ಲಿಗೆ ಆಗಮಿಸಿದೆ.

ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿಯರ ನಿಗೂಢ ಸಾವಿನ ಪ್ರಕರಣ ಇದೇ ಮೊದಲನೇಯದ್ದೇನೂ ಅಲ್ಲ. ಈ ವರ್ಷ ಸೆಪ್ಟಂಬರ್‌ನಲ್ಲಿ 69ರ ಹರೆಯದ ನನ್‌, ಸಿಸ್ಟರ್‌ ಅಮಲಾ ಎಂಬಾಕೆ ಕೋಟ್ಟಯಂ ಸಮೀಪದ ಪಾಳಾ ಎಂಬಲ್ಲಿನ ಕಾರ್ಮೆಲ್‌ ಕಾನ್ವೆಂಟ್‌ನ ತನ್ನ ಕೋಣೆಯಲ್ಲಿ ಕೊಲೆಯಾಗಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಸತೀಶ್‌ ಬಾಬು ಎಂಬಾತನನ್ನು ಬಂಧಿಸಿದ್ದರು.

ಆದರೆ ಈ ಬಗೆಯ ನಿಗೂಢ ಸಾವಿನ ಪ್ರಕರಣಗಳಲ್ಲೇ ಅತ್ಯಂತ ಪ್ರಮುಖವಾದದ್ದು ಸಿಸ್ಟರ್‌ ಅಭಯಾ ಅವರ ಸಾವು. ಈಕೆ 1992ರಲ್ಲಿ ಕೋಟ್ಟಯಂನ ಸೈಂಟ್‌ ಪಿಯೂಸ್‌ ಕಾನ್ವೆಂಟ್‌ನ ಬಾವಿಯೊಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದರು.
-ಉದಯವಾಣಿ

Write A Comment