ರಾಷ್ಟ್ರೀಯ

ಎಚ್ ಐವಿ ಪ್ರಮಾಣಪತ್ರ ತೋರಿಸಿ …ನಂತರ ಲೈಂಗಿಕ ಕ್ರಿಯೆ ನಡೆಸುವ ! ಪತಿಗೆ ಶಾಕ್ ನೀಡಿದ ಪತ್ನಿ

Pinterest LinkedIn Tumblr

22

ಲಕ್ನೋ: ವರ್ಷ ಪೂರ್ತಿ ಮುಂಬಯಿಯಲ್ಲಿ ನೌಕರಿ ಮಾಡಿ ದೀಪಾವಳಿ ಹಬ್ಬಕ್ಕೆ ಉಡುಗೊರೆಯೊಂದಿಗೆ ಮನೆಗೆ ಬಂದ ಗಂಡನಿಗೆ, ಎಚ್ ಐವಿ ಸೋಂಕು ಪರೀಕ್ಷೆ ಮಾಡಿರುವ ಬಗ್ಗೆ ಪ್ರಮಾಣ ಪತ್ರ ನೀಡುವಂತೆ ಕೇಳಿ ಹೆಂಡತಿ ಶಾಕ್ ನೀಡಿದ್ದಾಳೆ.

ಉತ್ತರ ಪ್ರದೇಶದ ಲಕ್ನೋದ ಪತ್ತೇಪುರ್ ಜಿಲ್ಲೆಯ ಉದಾಯ್ ಸರಾಯ್ ಗ್ರಾಮದ ನಿವಾಸಿ ರಾಮ್ ಕಿಶೋರ್ ಮುಂಬಯಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಪತ್ನಿ ಅನಿತಾ ಮನೆಗೆ ಬಂದ ತನ್ನ ಪತಿಗೆ ಎಚ್ ಐ ವಿ ಸೋಂಕು ಪರೀಕ್ಷೆ ಮಾಡಿಸಿರುವ ಪ್ರಮಾಣ ಪತ್ರ ಕೇಳಿದ್ದಾಳೆ. ಹೆಂಡತಿ ಕೇಳಿದ ಈ ಪ್ರಶ್ನೆಗೆ ಗಂಡ ಶಾಕ್ ಆಗಿದ್ದಾನೆ.

ಉತ್ತರ ಪ್ರದೇಶದ ಈ ಹಳ್ಳಿಯಲ್ಲಿ 200 ಮನೆಗಳಿದ್ದು, ಅದರಲ್ಲಿ ಸುಮಾರು 250 ಪುರುಷತರು ಮುಂಬಯಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ ಮಾತ್ರ ಬರುವ ಈ ಪುರುಷರು, ಹಣ, ಉಡುಗೊರೆ ಜೊತೆಗೆ ಎಚ್ ಐ ವಿ ಸೋಂಕನ್ನು ಹೊತ್ತು ತರುತ್ತಿದ್ದಾರೆ.

ಹೀಗಾಗಿ ಅಲ್ಲಿನ ಮಹಿಳೆಯರು ತಮ್ಮ ಗಂಡಂದಿರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಮುನ್ನ ಎಚ್ ಐ ವಿ ಪ್ರಮಾಣ ಪತ್ರ ತೋರಿಸುವಂತೆ ಕೇಳುತ್ತಿದ್ದಾರೆ. ಒಂದು ವೇಳೆ ತೋರಿಸದಿದ್ದರೇ ಕರೆದುಕೊಂಡು ಹೋಗಿ ಎಚ್ ಐ ವಿ ಸೋಂಕು ಪರೀಕ್ಷೆ ಮಾಡಿಸುತ್ತಿದ್ದಾರೆ.

ಕಳೆದ 10 ವರ್ಷಗಳಲ್ಲಿ ಈ ಗ್ರಾಮವೊಂದರಲ್ಲೇ ಸುಮಾರು 12 ಮಂದಿ ಎಚ್ ಐವಿ ಸೋಂಕಿಗೆ ಬಲಿಯಾಗಿರುವುದು ಇಲ್ಲಿನ ಮಹಿಳೆಯರನ್ನು ಆತಂಕಕ್ಕೀಡು ಮಾಡಿದೆ.

Write A Comment